images-15.jpeg
Spread the love

ಅಜೆಕಾರು: ದಿನಾಂಕ :01-05-2026 (ಹಾಯ್ ಉಡುಪಿ ನ್ಯೂಸ್) ದೊಂಡೆರಂಗಡಿ ಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ್ ಟಿ.ಎಮ್ ಅವರು ಬಂಧಿಸಿದ್ದಾರೆ.

ಅಜೆಕಾರು ಪೊಲೀಸ್ ಠಾಣಾ ಸರಹದ್ದಿನ ಕುಕ್ಕುಜೆ ಗ್ರಾಮದ ದೊಂಡೆರಂಗಡಿ ಪೇಟೆಯ ಸಂತೋಷ್‌ ಪೂಜಾರಿ ಎಂಬವರ ಅಂಗಡಿ ಬಳಿ ಆರೋಪಿ ಅಶ್ವಿನ್‌ ಎಂಬವನು  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಚೀಟಿಯಲ್ಲಿ ನಂಬ್ರ ಬರೆದು ಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತ್ತಿದ್ದುದನ್ನು ಕಂಡು ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ  ಮಹೇಶ್‌ ಟಿ.ಎಮ್‌ ಅವರು ದಿನಾಂಕ:30-04-2026 ರಂದು ಪೊಲೀಸ್ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಅಶ್ವಿನ್ ನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ  ಜನರಿಂದ ಹಣವನ್ನು ಸಂಗ್ರಹಿಸಿ ಸಂತೋಷ ಪೂಜಾರಿ ಎಂಬವರಿಗೆ ನೀಡುತ್ತಿದ್ದು ಅವರು ತನಗೆ 100 ರೂಪಾಯಿಗೆ 20 ರೂಪಾಯಿಯಂತೆ ಕಮಿಷನ್‌ ನೀಡುತ್ತಿದ್ದುದಾಗಿ  ತಿಳಿಸಿದ್ದಾನೆ.

ಇದನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವುದಾಗಿ ತಿಳಿಸಿದ್ದು ಆತನ ವಶದಲ್ಲಿದ್ದ ಮಟ್ಕಾ ನಂಬ್ರ ಬರೆದ ಚೀಟಿ -1, ಬಾಲ್‌ ಪೆನ್ನು -1, ನಗದು ರೂ 1,320/- ನ್ನು ಮುಂದಿನ ಕ್ರಮದ ಬಗ್ಗ ಸ್ವಾಧಿನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ  ಕಲಂ: 112 BNS -2023 ಮತ್ತು ಕಲಂ : 78(i)(iii) ಕೆ.ಪಿ ಆಕ್ಟ್‌ ರಂತೆ ಪ್ರಕರಣ ದಾಖಲಾಗಿದೆ.

error: No Copying!