images-4.jpeg
Spread the love

ಮಲ್ಪೆ: ದಿನಾಂಕ:01-05-2026(ಹಾಯ್ ಉಡುಪಿ ನ್ಯೂಸ್) ಬಂದರಿನ ದಕ್ಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಯೋರ್ವರಿಗೆ ಕಾರೊಂದರಲ್ಲಿ ಬಂದ ಐದು ಜನರ ತಂಡವು ಥಳಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಗದೀಶ್‌ ಕೆ ಅಮೀನ್‌ ಎಂಬವರು ದಿನಾಂಕ:30-04-2026 ರಂದು ಬೆಳಿಗ್ಗೆ ಕೊಡವೂರು ಗ್ರಾಮದ ಮಲ್ಪೆ ಬಂದರಿನ ಆಕ್ಷನ್‌ ದಕ್ಕೆಯಲ್ಲಿರುವಾಗ ಜಯೇಶ್‌ ಕೋಟ್ಯಾನ್‌,ಅವರ ತಾಯಿ ಭಾರತಿ ಕೋಟ್ಯಾನ್‌ , ಉದಯ ಪೂಜಾರಿ ಯಾನೆ ಕೋರಿ ಉದಯ, ಶೇಕು ಕಟಪಾಡಿ, ಮತ್ತು ಪರುಶೋತ್ತಮ ಎಂಬವರು ಬಿಳಿಬಣ್ಣದ ಕಾರಿನಲ್ಲಿ ಬಂದು ಜಗದೀಶ್‌ ಅಮೀನ್‌ ರವರನ್ನು ಉದ್ದೇಶಿಸಿ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕುತ್ತಿಗೆಯನ್ನು ಹಿಡಿದು ಕಾಂಕ್ರಿಟ್‌ ದಕ್ಕೆಗೆ ದೂಡಿದ್ದು ಜಯೇಶ್‌ ಕೋಟ್ಯಾನ್‌ ನು ಬರಿಗಾಲಿನಿಂದ ಜಗದೀಶ್ ಕೆ ಅಮೀನ್ ರವರ  ಎದೆಗೆ ಮತ್ತು ಮರ್ಮಾಂಗಕ್ಕೆ ತುಳಿದಿರುತ್ತಾನೆ.

ಉದಯ ಪೂಜಾರಿ ಎಂಬಾತನು ಜಗದೀಶ್ ಕೆ ಅಮೀನ್ ರ ಎದೆಗೆ ಕೈ ಹಾಕಿ ನೆಲಕ್ಕೆ ದೂಡಿರುತ್ತಾನೆ, ಭಾರತಿ ಕೋಟ್ಯಾನ್‌ ಶರ್ಟನ್ನು ಎಳೆದಾಡಿ ಕೆನ್ನೆಗೆ ಹೊಡೆದಿರುತ್ತಾರೆ, ಶೇಕು ಕಟಪಾಡಿ ಮತ್ತು ಪುರುಶೋತ್ತಮ ರವರು ಬೆನ್ನಿನ ಭಾಗಕ್ಕೆ ಗುದ್ದಿರುತ್ತಾರೆ,ನಂತರ ಜಯೇಶ್‌ ಕೋಟ್ಯಾನ್‌ ಚಾಕು ಹಿಡಿದು ಜಗದೀಶ್ ಕೆ ಅಮೀನ್ ರಿಗೆ ಚುಚ್ಚಲು ಬಂದಿದ್ದು ಅವರು ಅಲ್ಲಿಂದ ತಪ್ಪಿಸಿಕೊಂಡಿದ್ದು ಅರೋಪಿತನು ತುಳು ಭಾಷೆಯಲ್ಲಿ ನಿನ್ನನ್ನು ಇವತ್ತು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು,ನಂತರ ಅಲ್ಲಿನ ಸ್ಥಳೀಯರು ಚಿಕಿತ್ಸೆ ಬಗ್ಗೆ ಜಗದೀಶ್ ಕೆ ಅಮೀನ್ ರನ್ನು ಉಡುಪಿ ಹೈಟೆಕ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಜಗದೀಶ್ ಕೆ ಅಮೀನ್ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಠಾಣೆಯಲ್ಲಿ ಕಲಂ: 189(2),191(2),191(3),352,115(2),109 R/W 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!