IMG-20260427-WA0044-1536x864.jpg
Spread the love

ದಿನಾಂಕ:27-04-2026(ಹಾಯ್ ಉಡುಪಿ ನ್ಯೂಸ್)

ಉಡುಪಿ: ಸಿಟಿ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಕಟ್ಟಡಕ್ಕೆ ತಗುಲಿದ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ HRS ಉಡುಪಿ ವತಿಯಿಂದ ಇಂದು ಆಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಬೇಡಿಕೆಗಳು ಇಂತಿವೆ:

1. ಘಟನೆಯಲ್ಲಿ ನಷ್ಟ ಅನುಭವಿಸಿದ ವ್ಯಾಪಾರಸ್ಥರ ಕುರಿತು ತಕ್ಷಣ ಸಮಗ್ರ ಹಾನಿ ಸಮೀಕ್ಷೆ ನಡೆಸಿ, ತುರ್ತು ಆರ್ಥಿಕ ಪರಿಹಾರವನ್ನು ಸರ್ಕಾರದಿಂದ ಒದಗಿಸಬೇಕು.
2. ಅಗ್ನಿ ಅನಾಹುತ ಸಂಭವಿಸಿದ ನಂತರ ಸುಮಾರು 45 ನಿಮಿಷಗಳವರೆಗೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸದಿರುವ ಕುರಿತು ವ್ಯಾಪಾರಸ್ಥರು ಗಂಭೀರ ಆರೋಪ ವ್ಯಕ್ತಪಡಿಸಿರುವುದರಿಂದ, ಈ ವಿಚಾರದಲ್ಲಿ ಪಾರದರ್ಶಕ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು.
3. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಆಡಳಿತ ವೈಫಲ್ಯ ಪತ್ತೆಯಾದಲ್ಲಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
4. ನಗರದಲ್ಲಿನ ಎಲ್ಲಾ ವಾಣಿಜ್ಯ ಸಂಕೀರ್ಣಗಳಲ್ಲಿ ಅಗ್ನಿ ಭದ್ರತಾ ಕ್ರಮಗಳನ್ನು ಕಡ್ಡಾಯಗೊಳಿಸಿ, ಅಗ್ನಿ ನಿರೋಧಕ ಉಪಕರಣಗಳ ಸ್ಥಾಪನೆ ಹಾಗೂ ಅವುಗಳ ನಿಯಮಿತ ಪರಿಶೀಲನೆ ಖಚಿತಪಡಿಸಬೇಕು.
5. ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ರೀತಿಯ ಕಟ್ಟಡ ನಿರ್ಮಾಣ ಹಾಗೂ ದಾರಿಗಳ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಿ, ಸೆಟ್‌ಬ್ಯಾಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
6. ವ್ಯಾಪಾರಸ್ಥರು ಮತ್ತು ಸಿಬ್ಬಂದಿಗೆ ಅಗ್ನಿ ನಿರ್ವಹಣೆಯ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
7. ಅಗ್ನಿಶಾಮಕ ದಳದ ಸಾಮರ್ಥ್ಯವನ್ನು ಹೆಚ್ಚಿಸಿ, ತ್ವರಿತ ಸ್ಪಂದನೆಗಾಗಿ ಅತ್ಯಾಧುನಿಕ ಉಪಕರಣಗಳು ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಬೇಕು.

ಇಂತಹ ದುರ್ಘಟನೆಗಳು ಮರುಕಳಿಸದಂತೆ ಶಾಶ್ವತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು HRS ಪದಾಧಿಕಾರಿಗಳು ಮನವಿ ಮೂಲಕ ಆಗ್ರಹಿಸಿದ್ದಾರೆ.

error: No Copying!