IMG_20260427_150454.jpg
Spread the love

ಅಜೆಕಾರು: ದಿನಾಂಕ:27-04-2026 (ಹಾಯ್ ಉಡುಪಿ ನ್ಯೂಸ್) ಕಡ್ತಲ ಗ್ರಾಮದ ಭರ್ಭರೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ 26/04/2026 ರಂದು ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಭರ್ಭರೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದ ಒಳಗೆ ಆವರಣದಲ್ಲಿರುವ ಭರ್ಭರೇಶ್ವರ, ಕೊಡಮಣಿತ್ತಾಯ, ನಾಗದೇವರ ಕಾಣಿಕೆ ಹುಂಡಿಯ ಬೀಗವನ್ನು ಓರ್ವ ವ್ಯಕ್ತಿಯು ಯಾವುದೋ ಆಯುಧದಿಂದ ಮುರಿದು ಹುಂಡಿಯಲ್ಲಿದ್ದ 1,000/- ರೂಪಾಯಿ ಕಾಣಿಕೆ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ.

ದೇವಸ್ಥಾನದಲ್ಲಿ ಕಾವಲಿಗೆ ಉಳಿದುಕೊಳ್ಳುವ ಉಮೇಶ ಹೆಗ್ಡೆ, ಜನಾರ್ಧನ ಆಚಾರ್ಯ ಇವರು ಶಬ್ದ ಕೇಳಿ ಬರುವುದನ್ನು ನೋಡಿ, ಈ ವ್ಯಕ್ತಿ ಅಲ್ಲಿಂದ ಓಡಿ ಹೋಗಿ ಹೊರಗೆ ಇದ್ದ ಬೈಕ್‌ನಲ್ಲಿ ಪರಾರಿಯಾಗಿರುವುದಾಗಿ ಕಡ್ತಲ ಗ್ರಾಮದ ಶರಣ್‌ ಹೆಗ್ಡೆ (42) ಗೆ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ  ಕಲಂ: 305 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!