ಬೈಂದೂರು: ಪಡುವರಿ ಚಿನ್ನ ಕಳ್ಳತನ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸರು ಅಂತರ್ ರಾಜ್ಯ ಕಳ್ಳನೋರ್ವನನ್ನು ಬಂಧಿಸಿದ್ದಾರೆ.
ದಿನಾಂಕ 05-03-2026 ರಂದು ಹಗಲು ವೇಳೆ ಬೈಂದೂರು ಸೋಮೇಶ್ವರ ರಸ್ತೆಯಲ್ಲಿರುವ ಪಡುವರಿ ಗ್ರಾಮದ ಗುರುಕಿರಣ್ ಪಟ್ಯಾಲ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಹಗಲಿನಲ್ಲಿ ಮನೆಯ ಬಾಗಿಲನ್ನು ಮುರಿದು ಮನೆಯೊಳಗಿನ ಕೋಣೆಯ ಗೋಡ್ರೇಜ್‌ನಲ್ಲಿ ಇರಿಸಿದ್ದ ಚಿನ್ನಾಭರಣಗಳು ಮತ್ತು ನಗದು ಕಳ್ಳವು ಮಾಡಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ 331 (3) 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತನಿರೀಕ್ಷಕರಾದ ಶಿವಕುಮಾರ್ ಬಿ. ರವರು ನಡೆಸುತ್ತಿದ್ದು, ಈ ಕೃತ್ಯದಲ್ಲಿ ಭಾಗಿಯಾದ ಅಂತರಾಜ್ಯ ಕಳ್ಳನಾಗಿರುವ ಉಮೇಶ್ ಬಳ್ಳಿಗಾರ ಯಾನೆ ಉಮೇಶ್ ಪಿ ಯಾನೆ ಉಮೇಶ್ ರೆಡ್ಡಿ ಈತನ ಪತ್ತೆಗಾಗಿ ಬೈಂದೂರು ವೃತ್ತದ ಪಿ.ಎಸ್.ಐ. ಮತ್ತು ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು .
ಈ ವಿಶೇಷ ತಂಡವು ದಿನಾಂಕ 21.04.2026 ರಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿರುತ್ತದೆ. ತನಿಖೆ ಸಮಯ ಆಪಾದಿತನು ತಾನು ಕಳವು ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡು ಮದುರೈ ಕಡೆ ಮಾರಾಟ ಮಾಡುವುದಕ್ಕಾಗಿ ಗಟ್ಟಿ ಮಾಡಿಸಿ ಬಚ್ಚಿಟ್ಟಿರುವುದಾಗಿ ತಿಳಿಸಿದ ಮೇರೆಗೆ ತನಿಖಾಧಿಕಾರಿ ಶಿವಕುಮಾರ್ ಬಿ. ವೃತ್ತ ನಿರೀಕ್ಷಕರು ಬೈಂದೂರು ರವರು ತನಿಖಾ ತಂಡದೊಂದಿಗೆ ತಮಿಳುನಾಡು ಮದುರೈಗೆ ಹೋಗಿ ಆರೋಪಿಯಿಂದ ಸುಮಾರು 2.81 ಲಕ್ಷ ಮೌಲ್ಯದ ಒಟ್ಟು 22 ಗ್ರಾಂ ಚಿನ್ನದ ಗಟ್ಟಿಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಆಪಾದಿತ ಉಮೇಶ್ ಬಳ್ಳಿಗಾರ ಅಂತರರಾಜ್ಯ ರೂಢಿಗತ ಕಳವು ಪ್ರಕರಣಗಳ ಆರೋಪಿಯಾಗಿದ್ದು ಈತನ ವಿರುದ್ಧ ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ,ಪೊಲೀಸ್ ಠಾಣೆಗಳಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿದ್ದು 8 ಪ್ರಕರಣಗಳಲ್ಲಿ ಶಿಕ್ಷೆಯಾಗಿರುತ್ತದೆ.
ಇನ್ನೂ 23 ಪ್ರಕರಣಗಳು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಬೆಳ್ತಂಗಡಿ, ಬಂಟ್ವಾಳ, ಮೂಡಬಿದ್ರಿ, ಸುಬ್ರಹ್ಮಣ್ಯ, ಪುತ್ತೂರು, ಕೊಪ್ಪ, ತೀರ್ಥಹಳ್ಳಿ, ಶಿರಸಿ, ಬಸವನಹಳ್ಳಿ ,ಚಿಕ್ಕಮಗಳೂರು, ಹಿರಿಯೂರು ,ಚಿತ್ರದುರ್ಗ, ಶೃಂಗೇರಿ, ಕುಮಟಾ, ಮಲ್ಪೆ ಮತ್ತು ಕಾಪು ಪೊಲೀಸ್ ಠಾಣೆಗಳ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿ ಬಾಕಿ ಇರುತ್ತದೆ.
ಈ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್ ಐ.ಪಿ.ಎಸ್. ರವರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ನಾಯಕ್ ಉಡುಪಿ ಜಿಲ್ಲೆ ರವರ ನಿರ್ದೇಶನದಂತೆ ಮತ್ತು ಶ್ರೀ ಹೆಚ್.ಡಿ. ಕುಲಕರ್ಣಿ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರ ಮಾರ್ಗದರ್ಶನದಲ್ಲಿ ನಡೆಸಲಾಗಿರುತ್ತದೆ. ಈ ಕಾರ್ಯಾಚರಣೆಯನ್ನು ಶಿವಕುಮಾರ್ ಬಿ. ಸಿಪಿಐ ಬೈಂದೂರುರವರ ನೇತೃತ್ವದಲ್ಲಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಸುನೀಲ್ ಕುಮಾರ್. ಬಿ.ವೈ ಮತ್ತು ನವೀನ್ ಬೋರೇಕರ, ಕೊಲ್ಲೂರು ಪೊಲೀಸ್ ಠಾಣೆಯ ಪಿ.ಎಸ್.ಐ. ರವರಾದ ಭೀಮಾ ಶಂಕರ ಮತ್ತು ವಿನಯ ಕಾರ್ಲ್ ಹಳ್ಳಿ ಹಾಗೂ ಬೈಂದೂರು ಪೊಲೀಸ್ ಠಾಣೆಯ ಎಎಸ್ಐ ಸೀತಾರಾಮ ಮತ್ತು ಸಿಬ್ಬಂದಿಯವರಾದ ಚಿದಾನಂದ, ಮಾಣಪ್ಪ ದೇಸಾಯಿ, ತಿಮ್ಮಣ್ಣ ನಾಯ್ಕ್, ಕೊಲ್ಲೂರು ಠಾಣೆಯ ಸಿಬ್ಬಂದಿಯವರಾದ ನಾಗೇಂದ್ರ, ರಾಮ ಪೂಜಾರಿ, ಗಂಗೊಳ್ಳಿ ಠಾಣೆಯ ಸಿಬ್ಬಂದಿಯವರಾದ ಕೃಷ್ಣ, ಸಂದೀಪ್ ಕುರಾಣಿ, ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಬೆರಳು ಮುದ್ರೆ ವಿಭಾಗದ ಪೊಲೀಸ್ ನಿರೀಕ್ಷಕರಾದ ಎಲ್ ಮೋಹನ ಕುಮಾರಿ ಮತ್ತು ಸಿಬ್ಬಂದಿಯವರು ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ರವರು ಸಹಕರಿಸಿರುತ್ತಾರೆ.
