ದಿನಾಂಕ:26-04-2026(ಹಾಯ್ ಉಡುಪಿ ನ್ಯೂಸ್) ದೋಹಾ, ಕತಾರ್ : ಕನ್ನಡ ಸಂಘ ಕತಾರ್‌ನ 2026-2028ರ ಅವಧಿಗೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಈ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಸ್ವೀಕರಿಸಿರುವ ಅವರು, ಸಮುದಾಯಕ್ಕೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಗೌರವದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ರವಿ ಶೆಟ್ಟಿ ಹಾಗೂ ಆಡಳಿತ ಸಮಿತಿ (2024-2026) ಅವರ ಸೇವೆ ಮತ್ತು ಕೊಡುಗೆಗಳನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಅವರ ಶ್ರಮದಿಂದ ಸಂಘದ ಅಭಿವೃದ್ಧಿಗೆ ಬಲವಾದ ಅಡಿಪಾಯ ನಿರ್ಮಾಣವಾಗಿದೆ ಎಂದರು
ಸಂಘದ ಎಲ್ಲಾ ಪೂರ್ವ ಅಧ್ಯಕ್ಷರಾದ ಸತೀಶ್ ದೇಶಪಾಂಡೆ, ನಾಗರಾಜ್, ಪ್ರಕಾಶ್ ಬಾಬು, ಕೆ. ಪ್ರಭಾಕರ್, ಅರವಿಂದ್ ಪಾಟೀಲ್, ಅರುಣ್ ಕುಮಾರ್ ಕೆ.ಎಂ., ವಿ.ಎಸ್. ಮನ್ನಂಗಿ, ದೀಪಕ್ ಶೆಟ್ಟಿ, ಜಿ.ಕೆ. ಮಧು, ವೆಂಕಟ್ ರಾವ್, ಡಿ. ಮೈಪಾಡಿ ನಾಗೇಶ್ ರಾವ್, ಸಂಜಯ್ ಕುಡರಿ, ಮಹೇಶ್ ಗೌಡ ಹಾಗೂ ರವಿ ಶೆಟ್ಟಿ ಅವರ ಸೇವೆಯನ್ನು ಅವರು ಸ್ಮರಿಸಿ ಪ್ರಶಂಸಿಸಿದರು.
ಸಂಘದ ಎಲ್ಲಾ ಸಮಿತಿ ಸದಸ್ಯರು, ಸಮುದಾಯ ಮುಖಂಡರು ಮತ್ತು ಸದಸ್ಯರ ನಿರಂತರ ಸೇವೆ ಹಾಗೂ ಸಹಕಾರವನ್ನು ಅವರು ಶ್ಲಾಘಿಸಿದರು.
ಮುಂದಿನ ಅವಧಿಯಲ್ಲಿ ಕನ್ನಡ ಸಮುದಾಯದ ಬಂಧವನ್ನು ಮತ್ತಷ್ಟು ಬಲಪಡಿಸುವುದು, ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಎಲ್ಲರಿಗೂ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.
