ಪಡುಬಿದ್ರಿ : ದಿನಾಂಕ:24-04-2026(ಹಾಯ್ ಉಡುಪಿ ನ್ಯೂಸ್) ಮುಂಬೈನಿಂದ ಕಾರ್ಕಳ ಇನ್ನಾ ಗ್ರಾಮಕ್ಕೆ ಬಂದಿದ್ದ ವ್ಯಕ್ತಿ ಯೋರ್ವರು ಕಾಣೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ,ಇನ್ನಾ ಗ್ರಾಮದ ನಿವಾಸಿ ಪ್ರಶಾಂತ್ ಸಂಜೀತ್ ಕುಂದರ (41) ಎಂಬವರು ಮುಂಬೈನ ಗೊರೆಗಾವ್‌ನಲ್ಲಿ ಡಿಲಿವೆರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದು ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದು ಪ್ರಶಾಂತ್ ರವರಿಗೆ ಊರಿನ ನಿವಾಸಿಯಾದ ಮುಂಬೈಯ ವಿರಾರ್‌ನಲ್ಲಿರುವ ಗಿರೀಶ್ ನಾಗೇಶ್ ಪೂಜಾರಿ (37) ರವರು ಗೆಳೆಯರಾಗಿರುತ್ತಾರೆ, ಗಿರೀಶ್ ರವರು ತಂದೆ ತಾಯಿ ತೀರಿಕೊಂಡ ನಂತರ ಮುಂಬೈನಲ್ಲಿ ವಾಸವಾಗಿದ್ದು, ಕಳೆದ ಹತ್ತು ವರ್ಷಗಳಿಂದ ಊರಾದ ಇನ್ನಾ ಗ್ರಾಮಕ್ಕೆ ಬಂದಿರುವುದಿಲ್ಲ.
ಪ್ರಶಾಂತ್ ರವರು ಗೆಳೆಯ ಗಿರೀಶ್‌ರಲ್ಲಿ ಊರಿನ ಕೋಡ್ದಬ್ಬು ಕೋಲದ ಬಗ್ಗೆ ಊರಿಗೆ ಹೋಗುವುದಾಗಿ ತಿಳಿಸಿದ್ದು ಗಿರೀಶ್ ರವರು ಪ್ರಶಾಂತ್ ರವರ ಜೊತೆ ಬರುವುದಾಗಿ ಹೇಳಿ ಮುಂಬೈಯಿಂದ ಹೊರಟು ದಿನಾಂಕ 21/04/2026 ರಂದು ಬೆಳಿಗ್ಗೆ ಸುರತ್ಕಲ್ ರೈಲ್ವೇ ನಿಲ್ಧಾಣಕ್ಕೆ ಬಂದು ನಂತರ ಗಿರೀಶ್‌ರವರೊಂದಿಗೆ ಪ್ರಶಾಂತ್ ರವರು ಹೆಂಡತಿ ಮನೆ ಕಾಟಿಪಳ್ಳಕ್ಕೆ ಹೋಗಿದ್ದು ಅಲ್ಲಿಂದ ಗಿರೀಶ್‌ನು ಇನ್ನಾದ ಪ್ರಶಾಂತ್ ರವರ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು ಇದೀಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆತನನ್ನು ಹುಡುಕಾಡಿದರೂ ಸಿಕ್ಕಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 53/2026, ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿದೆ.
