images-18.jpeg
Spread the love

ಕುಂದಾಪುರ: ದಿನಾಂಕ:24-04-2026(ಹಾಯ್ ಉಡುಪಿ ನ್ಯೂಸ್) ಕುಂದಾಪುರ ತಾಲೂಕು ಕಸಬಾ ಗ್ರಾಮದ ಮದ್ದುಗುಡ್ಡೆ ಯಲ್ಲಿರುವ 10ಸೆಂಟ್ಸ್‌ ಭೂಮಿ (7 ಸೆಂಟ್ಸ್‌ ಪರಿವರ್ತಿತ ) ಮತ್ತು ಅದರಲ್ಲಿರುವ ಸುಮಾರು 700 ಚದರ ಅಡಿಯ ಕಟ್ಟಡ (ಡಿ ನಂ: 403-0/1 ಹಳೆಯ ಸರ್ವೆ ನಂ: 211/4 ಮತ್ತು ಹೊಸ ಸರ್ವೆ ನಂಬ್ರ: 211/4P2) ಈ ಆಸ್ತಿಯನ್ನು ಕೋರ್ಟ್‌ ಕಮೀಷನರ್‌ ಮತ್ತು ಪೊಲೀಸ್‌ ರಕ್ಷಣೆಯೊಂದಿಗೆ ಕರ್ನಾಟಕ ಬ್ಯಾಂಕ್‌ ವಶಪಡಿಸಿಕೊಂಡಿತ್ತು .

ದಿನಾಂಕ 28/08/2025 ರಂದು ಆರೋಪಿತರಾದ 1) ಸುರೇಶ್‌ ಮೇಸ್ತ, 2) ಗೀತಾ ಸುರೇಶ್‌ ಮೇಸ್ತ ಇವರು ಆಸ್ತಿಯಲ್ಲಿ ಅಕ್ರಮವಾಗಿ ಬೀಗಗಳನ್ನು ಒಡೆದು ಬ್ಯಾಂಕ್ ಅಳವಡಿಸಿದ್ದ ಎಚ್ಚರಿಕೆ ಬ್ಯಾನರ್‌ /ಪೋಸ್ಟರ್‌ ಗಳನ್ನು ಹರಿದು ಹಾಕಿ ಮರು ಪ್ರವೇಶ ಮಾಡಿ ಬ್ಯಾಂಕ್‌ ಗೆ ರೂಪಾಯಿ 10,000/- ನಷ್ಟ ವುಂಟುಮಾಡಿದ್ದಾರೆ ಎಂದು ಕರ್ನಾಟಕ ಬ್ಯಾಂಕ್‌ ಲಿಮಿಟೆಡ್‌ ಕುಂದಾಪುರ ಇದರ ಹಿರಿಯ ಶಾಖಾ ಪ್ರಬಂಧಕರಾಗಿರುವ ರಾಘವೇಂದ್ರ ನಾಯ್ಕ ಬಿ ಎನ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 324(4) , 329, 331 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!