ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಹೇಳುತ್ತಿರುವ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ನಾಯಕರುಗಳು ದಲಿತರ ವಿರೋಧಿಗಳೆಂದು ದೇಶದ ಜನರಿಗೆ ತಿಳಿಯುವಂತಾಯಿತು ಎಂದು ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರು ಪಕ್ಕದ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಬಗ್ಗೆ ಏನು ಮಾತನಾಡಿದ್ದಾರೆ ಅದರ ಬಗ್ಗೆ ಈಗಾಗಲೇ ಸೃಷ್ಟೀಕರಣವನ್ನು ನೀಡಿರುತ್ತಾರೆ. ಆದರೆ ನಮ್ಮ ದೇಶದ ಕೇಂದ್ರ ಸರಕಾರದ ಮಂತ್ರಿಗಳು ಮತ್ತು ಬಿಜೆಪಿಯ ರಾಜ್ಯದ ಕೇಂದ್ರದ ನಾಯಕರುಗಳು ದಲಿತ ಸಮುದಾಯದ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತ ದಿನಕ್ಕೊಂದು ಹೇಳಿಕೆಗಳನ್ನು ಅವರ ವಿರುದ್ಧ ನೀಡುತ್ತಿರುವುದು ಕೇಂದ್ರದ ಬಿಜೆಪಿ ನಾಯಕರುಗಳು ಹಾಗೂ ಮಂತ್ರಿಗಳು ದಲಿತರ ವಿರೋಧಿಗಳೆಂದು ಸಾಬೀತಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಬೇಕೆಂದು ಹೇಳುತ್ತಿರುವ ರಾಜ್ಯದ ವಿರೋಧ ಪಕ್ಷದ ನಾಯಕ ಅಶೋಕ್ ರವರು ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆಯನ್ನು ನೀಡಲಿ.ಅದೇ ರೀತಿಯಲ್ಲಿ ಕೇಂದ್ರ ಸಚಿವರು ಕೂಡ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ನಿರಂತರವಾಗಿ ಟೀಕೆಗಳನ್ನು ಮಾಡುತ್ತಿದ್ದು ದಲಿತ ವಿರೋಧಿಗಳೆಂದು ಸಾಬೀತಾಗಿದೆ. ತಾನೊಬ್ಬ ದೊಡ್ಡ ದಲಿತ ನಾಯಕನೆಂದು ಬಿಜೆಪಿಯಲ್ಲಿ ಗುರುತಿಸಿಕೊಂಡಂತ ಚಲವಾದಿ ನಾರಾಯಣರವರು ಕೂಡ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ದೂಷಿಸಿದ್ದು ಅವರೊಬ್ಬ ದಲಿತ ನಾಯಕನ ವಿರೋಧಿ ಎಂಬುದು ಸಾಬೀತಾಗಿದೆ.
ದಲಿತರ ಬಗ್ಗೆ ಬಿಜೆಪಿ ನಾಯಕರಗಳು ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಅವರು ಎರಡು ಮೂರು ದಿನಗಳಿಂದ ಪತ್ರಿಕೆಗಳಲ್ಲಿ ನೀಡುತ್ತಿರುವ ಹೇಳಿಕೆಗಳು ಸಾಕ್ಷಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಹಾಗೂ ಉಡುಪಿ ನಗರಸಭಾ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.
