ಕೋಟ: ದಿನಾಂಕ :16-04-2026(ಹಾಯ್ ಉಡುಪಿ ನ್ಯೂಸ್) ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಬಗ್ಗೆ ಫೋಟೋ ವರದಿ ಮಾಡಲು ತೆರಳಿದ್ದ ಪತ್ರಕರ್ತೆ ಆರತಿ ಗಿಳಿಯಾರು ಎಂಬವರಿಗೆ ಸ್ಥಳೀಯ ವ್ಯಕ್ತಿ ಹಾಗೂ ಇತರರು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಾವರ ತಾಲೂಕು,ಮೂಡುಗಿಳಿಯಾರು ಗ್ರಾಮದ ನಿವಾಸಿ ಆರತಿ ಗಿಳಿಯಾರು(31) ಎಂಬವರು ದಿನ ಪತ್ರಿಕೆಯೊಂದರಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 15.04.2026 ರಂದು ವಡ್ಡರ್ಸೆ ಗ್ರಾಮದ ಆರೋಪಿ ಪ್ರಣುತ್ ಗಾಣಿಗ ಎಂಬಾತನ ಮನೆ ಹತ್ತಿರ ಇರುವ 1 ಎಕ್ರೆ ಸರ್ಕಾರಿ ಜಾಗದಲ್ಲಿ ಆರೋಪಿತ ಪ್ರಣುತ್ ಗಾಣಿಗ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಮಾಹಿತಿ ಬಂದ ಸ್ಥಳಕ್ಕೆ ಹೋಗಿ ರಸ್ತೆಯಲ್ಲಿ ನಿಂತು GPS ಪೋಟೋ ತೆಗೆದು ವರದಿ ಮಾಡುತ್ತಿದ್ದ ಸಂಧರ್ಭದಲ್ಲಿ ಆರೋಪಿತ 1)ಪ್ರಣುತ್ ಗಾಣಿಗ 2)ಪ್ರಣುತ್ ಗಾಣಿಗರವರ ಚಿಕ್ಕಮ್ಮ 3) ಮತ್ತು ಆತನ ಸಹಚರರು ದಲಿತ ಪತ್ರಕರ್ತೆ ಯಾದ ಆರತಿ ಗಿಳಿಯಾರು ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 352, 351(2) R/w 3(5) BNS 3(1)(r) 3(1)(s) SC/ST Act ರಂತೆ ಪ್ರಕರಣ ದಾಖಲಾಗಿದೆ.
