ಹೆಬ್ರಿ: ದಿನಾಂಕ:16/04/2026 (ಹಾಯ್ ಉಡುಪಿ ನ್ಯೂಸ್) ಮುದ್ರಾಡಿ ಗ್ರಾಮದ ಮದಗ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರ ಎ ಕೆ ರವರು ಬಂಧಿಸಿದ್ದಾರೆ.
ಹೆಬ್ರಿ ಠಾಣಾ ಪಿ.ಎಸ್.ಐ (ತನಿಖೆ) ಚಂದ್ರ ಎ ಕೆ ರವರು ದಿನಾಂಕ:15-04-2026 ರಂದು ಹೆಬ್ರಿ ಪೇಟೆಯಲ್ಲಿ ರೌಂಡ್ಸ್ ನಲ್ಲಿರುವಾಗ ಠಾಣಾ ಹೆಚ್ ಸಿ, ಪ್ರದೀಪ್ ರವರು ಕರೆ ಮಾಡಿ ಮುದ್ರಾಡಿ ಗ್ರಾಮದ ಮದಗ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಎಂಬ ಆಟ ಆಡುತ್ತಿರುವುದಾಗಿ ಮಾಹಿತಿ ತಿಳಿಸಿದಂತೆ ಕೂಡಲೇ ಸ್ಥಳಕ್ಕೆ ಹೋಗಿ ಖಚಿತ ಪಡಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂಪಾಯಿಗೆ 70 ರೂಪಾಯಿ ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕೂಗಿ ಕರೆದು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಮಟ್ಕಾ ಆಡುತ್ತಿದ್ದವನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಹೆಸರು ಸಚಿನ್ (24) ಮುದ್ರಾಡಿ ಗ್ರಾಮ ಹೆಬ್ರಿ ತಾಲೂಕು ಎಂದು ತಿಳಿಸಿದ್ದಾನೆ .
ಸಚಿನ್ ತಾನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಸಂಗ್ರಹಿಸಿದ ಹಣವನ್ನು ಸಂತೋಷ ಎಂಬವರಿಗೆ ನೀಡುತ್ತಿರುವುದಾಗಿ ತಿಳಿಸಿದಂತೆ ಆತನನ್ನು ಪೊಲೀಸರು ಪರಿಶೀಲಿಸಿ ಆತನ ಬಳಿ ಇದ್ದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು 1690/- ರೂ, ಹಾಗೂ ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕಲಂ:112 BNS ಮತ್ತು ಕಲಂ: 78(1)(3) KP ACT ರಂತೆ ಪ್ರಕರಣ ದಾಖಲಾಗಿದೆ.
