ಮಲ್ಪೆ: ದಿನಾಂಕ:16-04-2026(ಹಾಯ್ ಉಡುಪಿ ನ್ಯೂಸ್)ಉದ್ದಿನಹಿತ್ಲು ಮಾರ್ಗವಾಗಿ ಮಲ್ಪೆ ಕಡೆಗೆ ಮರಳು ಕಳ್ಳತನ ನಡೆಸಿ ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯನ್ನು ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಅನೀಲ್ ಕುಮಾರ್ ಡಿ ಅವರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಅನೀಲ್ ಕುಮಾರ್ ಡಿ ಅವರು ದಿನಾಂಕ: 15/04/2026 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಕೊಡವೂರು ಗ್ರಾಮದ ಉದ್ದಿನಹಿತ್ಲಿನ ಬಳಿ ಜುಮಾದಿನಗರ ಕಡೆಯಿಂದ ಉದ್ದಿನಹಿತ್ಲು ಮಾರ್ಗವಾಗಿ ಮಲ್ಪೆ ಕಡೆಗೆ ಹಳದಿ ಬಣ್ಣದ ಟಾಟಾ 407 ಟಿಪ್ಪರ್ ವಾಹನ ನಂಬ್ರ.KA20AC1199 ನೇದನ್ನು ಅದರ ಚಾಲಕನು ಅನುಮಾನಾಸ್ಪದ ರೀತಿಯಲ್ಲಿ ಚಲಾಯಿಸಿಕೊಂಡು ಬಂದಾಗ ಪಿಎಸ್ಐ ರವರು ವಾಹನವನ್ನು ನಿಲ್ಲಿಸಿ,ಟಿಪ್ಪರ್ ವಾಹನದ ಚಾಲಕ ಬೈಲಪ್ಪ ಬಿರಾದಾರನನ್ನು ವಿಚಾರಿಸಿದಾಗ ಆತನ ಬಳಿ ಮರಳು ಸಾಗಾಟದ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆದಿರುವ ಯಾವುದೇ ದಾಖಲಾತಿಗಳು ಇರುವುದಿಲ್ಲ .
ಆರೋಪಿತರಾದ ವೈ.ಎಂ ಬ್ರದರ್ಸ್‌ನ ಸಾದಿಕ್ ಮತ್ತು ವಾಹನ ಚಾಲಕ ಯಾವುದೋ ಸ್ಥಳದಿಂದ ಮರಳನ್ನು ಒಬ್ಬಂಟಿಯಾಗಿಯೋ ಅಥವಾ ಸಂಘಟಿತವಾಗಿಯೋ ಕಳ್ಳತನ ಮಾಡಿಕೊಂಡು ಬಂದು,ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿರುವುದರಿಂದ ಟಿಪ್ಪರ್ ವಾಹನವನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ.
ಸುಮಾರು 1½ ಯುನಿಟ್ ನಷ್ಟು ಮರಳಿನ ಅಂದಾಜು ಮೌಲ್ಯ ರೂ. 5000/- ಮತ್ತು ಟಾಟಾ 407 ಟಿಪ್ಪರ್ ವಾಹನ ಅಂದಾಜು ಮೌಲ್ಯ ರೂ. 3,00,000/- ಆಗಬಹುದು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಕಲಂ: 303(2),112 ಬಿಎಸ್‌ಎಸ್ & 4, 4(A), 21 MMDR Act ರಂತೆ ಪ್ರಕರಣ ದಾಖಲಾಗಿದೆ.
