ಕೋಟ: ದಿನಾಂಕ:16-04-2026(ಹಾಯ್ ಉಡುಪಿ ನ್ಯೂಸ್) ವಡ್ಡರ್ಸೆ ಗ್ರಾಮದ ನಿವಾಸಿ ಯೋರ್ವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿದ ಕೆಲವು ವ್ಯಕ್ತಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಣುತ್ ಕುಮಾರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ವಡ್ಡರ್ಸೆ ಗ್ರಾಮದ ಕುಂಬಾರ ಬೆಟ್ಟು ನಿವಾಸಿ ಪ್ರಣುತ್ ಕುಮಾರ್ (29) ಎಂಬವರು News Next ಡಿಜಿಟಲ್ ನ ಚಾನೆಲ್ ನಲ್ಲಿ ಮಾಡಿದ ವರದಿಯಿಂದ ಕುಪಿತಗೊಂಡ ಅಜಿತ್ ಕುಮಾರ್ ಶೆಟ್ಟಿ ಎಂಬವರು ದಿನಾಂಕ:15.04.2026 ರಂದು ಮಧ್ಯಾಹ್ನ ಅಜಿತ್ ಕುಮಾರ್ ಶೆಟ್ಟಿ ,ಯಾಳಹಕ್ಲು ಚಂದ್ರಶೆಟ್ಟಿ ಹಾಗೂ ಅಪರಿಚಿತ ಮಹಿಳೆಯೋರ್ವಳು ಬಿಳಿ ಬಣ್ಣದ ಕ್ರೇಟಾ ಕಾರಿನಲ್ಲಿ ಬಂದು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯ ಅಂಗಳದಲ್ಲಿ ನಿಂತಿರುವ ಪ್ರಣುತ್ ಕುಮಾರ್ ರವರ ದೊಡ್ಡಮ್ಮನಾದ ಪ್ರೇಮಾ ರವರನ್ನು ಉದ್ದೇಶಿಸಿ ,ಪ್ರಣುತ್ ಕುಮಾರ್ ರನ್ನು ಹೊರಗೆ ಕರೆಯಿರಿ ನಮ್ಮ ವಿರುದ್ದ ವರದಿ ಪ್ರಸಾರ ಮಾಡಿ ಅವನಿಗೆ ಏನು ಮಾಡಲಿಕ್ಕೆ ಆಗುತ್ತದೆ?
ನೀವು ಹಾಗೂ ನಿಮ್ಮ ಮನೆಯವರು ತಕ್ಷಣ ಈ ಊರನ್ನು ಬಿಟ್ಟು ಹೋಗಬೇಕು ನೀವು ಈ ಊರನ್ನು ಬಿಟ್ಟು ಹೋಗದಿದ್ದರೆ ನಿಮ್ಮನ್ನು ಜೀವ ಸಹಿತ ಈ ಊರಿನಲ್ಲಿ ಬದುಕಲು ಬಿಡುವುದಿಲ್ಲ ಎಂದು ಜೀವ ಬೆದಿರಕೆ ಹಾಕಿರುತ್ತಾರೆ, ಈ ಗಲಾಟೆಯನ್ನು ಕೇಳಿ ಮನೆಯ ಒಳಗಿದ್ದ ಪ್ರಣುತ್ ಕುಮಾರ್ ಹೊರಗೆ ಬಂದಾಗ ಅಜಿತ್ ಕುಮಾರ್ ಶೆಟ್ಟಿ ಪ್ರಣುತ್ ಕುಮಾರ್ ರನ್ನುದ್ದೇಶಿಸಿ ಈ ತಕ್ಷಣ ವರದಿ ಡಿಲೀಟ್ ಮಾಡಬೇಕು ಒಂದುವೇಳೆ ಡಿಲೀಟ್ ಮಾಡದಿದ್ದಲ್ಲಿ ಕೋಟಾದಲ್ಲಿರುವ ನಿಮ್ಮ ಸ್ಟುಡಿಯೋಗೆ ಬೆಂಕಿ ಹಾಕಿ ನಿಮ್ಮನ್ನು ಕೊಂದು ಬಿಸಾಡುತ್ತೇವೆ ಹಾಗೂ ಆ ಸಂಧರ್ಭದಲ್ಲಿ ಚಂದ್ರಶೆಟ್ಟಿ ಕೂಡಾ ಇನ್ನು ಮುಂದೆ ನೀವು ಮೀನುಗಾರಿಕೆ ಹಾಗೂ ಕೊಜೆ ಮಣ್ಣಿನ ಕುರಿತು ವರದಿ ಪ್ರಸಾರ ಮಾಡಿದರೆ ನಿಮ್ಮ ಕೈಕಾಲು ಮುರಿದು ಬಿಸಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:65/2026ಕಲಂ: 329(3),351(3),351(2) ಜೊತೆಗೆ 3(5) ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿದೆ.
