IMG_20260415_181056.jpg
Spread the love

ಗಂಗೊಳ್ಳಿ: ದಿನಾಂಕ : 15/04/2026 (ಹಾಯ್ ಉಡುಪಿ ನ್ಯೂಸ್)  ಸಿದ್ದಿಕ್ ಫ್ಯಾಕ್ಟರಿಗೆ ಹೋಗುವ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ನವೀನ್ ಅವರು ಬಂಧಿಸಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್‌ ಉಪನಿರೀಕ್ಷಕರಾದ ನವೀನ್ ಅವರು ದಿನಾಂಕ :14-04-2026 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಸಿದ್ದಿಕ್ ಪ್ಯಾಕ್ಟರಿಗೆ ಹೋಗುವ ರಸ್ತೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ಬಂದ ಸಾರ್ವಜನಿಕ ಮಾಹಿತಿಯಂತೆ ದಾಳಿ ಮಾಡಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಮಧುಕರ ಮೇಸ್ತ ಎಂಬವನನ್ನು ಬಂಧಿಸಿ ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ಒಟ್ಟು 860/- ರೂಪಾಯಿ, ಮಟ್ಕಾ ಚೀಟಿ, ಬಾಲ್‌ ಪೆನ್ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆಪಾದಿತನಾದ ಮಧುಕರ ಮೇಸ್ತ ಎಂಬವನು ಗುಜ್ಜಾಡಿಯ ನಾಗರಾಜ ಖಾರ್ವಿ ಎಂಬವ ತಿಳಿಸಿದಂತೆ ಮಟ್ಕಾ ಜುಗಾರಿ ಮಾಡುತ್ತಿದ್ದು, ಅದರಿಂದ ಸಂಗ್ರಹವಾದ ಹಣವನ್ನು ಹಾಗೂ ಮಟ್ಕಾ ಚೀಟಿಯನ್ನು ನಾಗರಾಜ ಖಾರ್ವಿ ಗೆ ಕೊಡುತ್ತಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿಸಿದ್ದಾನೆ. ನಾಗರಾಜ ಖಾರ್ವಿಯು ತನ್ನ ಸ್ವಂತ ಲಾಭಕ್ಕಾಗಿ ಮಧುಕರ ಮೇಸ್ತನ ಮುಖೇನ ಮಟ್ಕಾ ಜುಗಾರಿ ಆಡಿಸಿ ಆ ಮೂಲಕ ಹಣ ಸಂಗ್ರಹಿಸಿ ಅಪರಾಧ ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ:78(1) (111) KP ACT & 112 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!