ಉಡುಪಿ: ದಿನಾಂಕ:15-04-2026(ಹಾಯ್ ಉಡುಪಿ ನ್ಯೂಸ್) ವಾಟ್ಸಪ್ ಸಂದೇಶದಲ್ಲಿ ಬಂದ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿದಾಗ ಅಪರಿಚಿತ ವಂಚಕರು ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾರೆ ಎಂದು ಅಬ್ದುಲ್ ಹಮೀದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಬ್ದುಲ್ ಹಮೀದ್ ಎಂಬವರು ಪಡುಬಿದ್ರಿ ಹೆಜಮಾಡಿ ಬ್ರಾಂಚ್ ನ ಕೆನರಾ ಬ್ಯಾಂಕ್ ನಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬ್ರಾಂಚ್ ನಲ್ಲಿ ಖಾತೆ ಹೊಂದಿದ್ದು. ದಿನಾಂಕ 12/04/2026 ರಂದು ಬೆಳಿಗ್ಗೆ ಅಬ್ದುಲ್ ಹಮೀದ್ ರವರ ಪರಿಚಯದ ಕುಮಾರ ಸ್ವಾಮಿ ಎಂಬವರ ಮೊಬೈಲ್ ನಂಬ್ರದಿಂದ R.T.O challan E-Court notification ಎಂಬ apk ಫೈಲ್ ವಾಟ್ಸ್ ಆಫ್ ನಲ್ಲಿ ಬಂದಿದ್ದು, ಅದನ್ನು ಡೌನ್ಲೋಡ್ ಮಾಡಿದ್ದು ಅದಾದ ನಂತರದಲ್ಲಿ ದಿನಾಂಕ 13/04/2026 ರಂದು ಹಂತ ಹಂತವಾಗಿ ಒಟ್ಟು ರೂಪಾಯಿ 4,86,13.74/- ಹಣ ಅವರ ಖಾತೆಯಿಂದ ಕಡಿತವಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 66(c),66 (d) IT Act & ಕಲಂ 318(4) BNS ರಂತೆ ಪ್ರಕರಣ ದಾಖಲಾಗಿದೆ.
