Nepai_wedding_engagement_IMG_6889.jpg
Spread the love

ಪಡುಬಿದ್ರಿ: ದಿನಾಂಕ:06-04-2026 (ಹಾಯ್ ಉಡುಪಿ ನ್ಯೂಸ್) ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ಯುವಕ ಹಾಗೂ ಆತನ ಮನೆಯವರು ವಂಚನೆ ನಡೆಸಿದ್ದಾರೆ ಎಂದು  ಯುವತಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಪು,ನಡ್ಸಾಲು ಗ್ರಾಮದ ನಿವಾಸಿ ಮನಿಷಾ (29) ಎಂಬವರು 3 ನೇ ಆರೋಪಿ ವಿಷ್ಣಪ್ರಸಾದ್ ಎಂಬವರನ್ನು ದಿನಾಂಕ 14/12/2023 ರಂದು ಗುರುಹಿರಿಯರ ಸಮಕ್ಷಮದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಂತರ 3 ನೇ ಆರೋಪಿ ವಿಷ್ಣುಪ್ರಸಾದ್ ನು ತನ್ನ ತಮ್ಮ 2 ನೇ ಆರೋಪಿ ವಿಜಯ ಹಾಗೂ 1 ನೇ ಆರೋಪಿ ನಮಿತ ಶೆಟ್ಟಿ ರವರೊಂದಿಗೆ ಸೇರಿ ಮನಿಷಾರವರಿಗೆ ಮೋಸ ಮಾಡುವ ಉದ್ದೇಶದಿಂದ ದಿನಾಂಕ 18/12/2024 ರಂದು ಮನಿಷಾ ರವರ ತೆಂಕ ಗ್ರಾಮದಲ್ಲಿ ಇರುವ ಸ್ಥಿರಾಸ್ತಿಯನ್ನು ಅಡಮಾನ ಇರಿಸಿ ಸಾಲ ತೆಗೆಯುವುದಾಗಿ ನಂಬಿಸಿ ಅದನ್ನು ಮನಿಷಾರವರ ಗಮನಕ್ಕೆ ತರದೆ ಮಾರಾಟ ಮಾಡಿ ವಂಚಿಸಿ ನಷ್ಟವುಂಟು ಮಾಡಿದ್ದಾನೆ.

ಅಲ್ಲದೆ 3 ನೇ ಆರೋಪಿ ವಿಷ್ಣುಪ್ರಸಾದ್ ನು ಮನಿಷಾರನ್ನು ಮದುವೆಯಾಗುವುದಾಗಿ ನಂಬಿಸಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಮನಿಷಾರ ಹೆಸರಿನಲ್ಲಿ ಹಲವು ಕಡೆ ಸಾಲವನ್ನು ಮಾಡಿದ್ದು, ಅದನ್ನು ಮರುಪಾವತಿ ಮಾಡದೆ ಮದುವೆಯನ್ನೂ ಆಗದೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ್ದಾನೆ ಎಂದು ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 318,316 IPC ಯಂತೆ ಪ್ರಕರಣ ದಾಖಲಾಗಿದೆ.

error: No Copying!