images-14.jpeg
Spread the love

ಮಣಿಪಾಲ: ದಿನಾಂಕ:06-04-2026 (ಹಾಯ್ ಉಡುಪಿ ನ್ಯೂಸ್) TMA Pai ಪೊಲೀಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸುವ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ  ಬರೆಯುತ್ತಿದ್ದ ವಿದ್ಯಾರ್ಥಿ ಯೋರ್ವ ಪ್ರಶ್ನೆ ಪತ್ರಿಕೆ ಕದ್ದು ಅದನ್ನು ಹೊರಗಡೆ ಪ್ರಸಾರ ಮಾಡುವ ಪ್ರಯತ್ನ ನಡೆಸಿರುವ ಬಗ್ಗೆ ವಿ.ಕೆ ಮನೋಹರ್ ಕುಮಾರ್ (53) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಜವಹಾರ್ ನವೋದಯ ವಿಧ್ಯಾಲಯ ಚಾರ ಹೆಬ್ರಿ ಕಾರ್ಕಳ ಇಲ್ಲಿನ ಸಹಾಯಕ ಪ್ರಾಂಶುಪಾಲರಾದ ವಿ.ಕೆ.ಮನೋಹರ್ ಎಂಬವರು ದಿನಾಂಕ 05/04/2026 ರಂದು TMA Pai ಪೊಲೀಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸುವ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ಪೊಲೀಟೆಕ್ನಿಕ್ ಕಾಲೇಜಿನ ION Degital Zone IDZ Milk Dairy ಮಣಿಪಾಲದ ಪರೀಕ್ಷಾ ಕೇಂದ್ರದ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾಲೇಜಿನ ಪರೀಕ್ಷಾ ಕೇಂದ್ರದ ವೆನ್ಯೂಕಮಾಂಡಿಗ್ ಅಧಿಕಾರಿ ಮನೋಜ್ ಕುಮಾರ್ ಎಂಬವರಾಗಿದ್ದು ಮಹೇಶ್ ನಾಯ್ಕ್ ಎಂಬವರು ಪರೀಕ್ಷಾ ಕೇಂದ್ರದ ಅಡ್ಮಿನ್ ಮೆನೇಜರ್ ಆಗಿರುತ್ತಾರೆ. ಪರೀಕ್ಷೆಯನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ನೆಡೆಸಿದ್ದು ಬೆಳಿಗ್ಗೆ ಸುಮಾರು 149 ಮಕ್ಕಳು ಮಧ್ಯಾಹ್ನ 133 ಮಕ್ಕಳು ಹಾಜರಾಗಿರುತ್ತಾರೆ.

ಮಧ್ಯಾಹ್ನ 3:00 ಗಂಟೆಯಿಂದ ಪರೀಕ್ಷೆ ಪ್ರಾರಂಭವಾಗಿರುತ್ತದೆ. ಪರೀಕ್ಷೆಗೆ ಒಳಗೆ ಬರುವ ವಿಧ್ಯಾರ್ಥಿಯವರಿಗೆ ವಿಳಾಸದ ಮಾಹಿತಿ ಬಗ್ಗೆ ಮೂಲ ಆಧಾರದ ಕಾರ್ಡ್ ಅಥವಾ ಪಾನ್ ಕಾರ್ಡ್ ಹಾಗೂ ಪರೀಕ್ಷೆಯ ಹಾಲ್ ಟಿಕೇಟ್ (Admit card) ತೆಗೆದುಕೊಂಡು ಬರಲು ಅನುಮತಿ ಇರುತ್ತದೆ. ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿರುವ ಉತ್ತರಖಂಡದ ವಿಧ್ಯಾರ್ಥಿಯಾಗಿದ್ದ ಅರೀದಮಾನ್ ಸಿಂಗ್ ಸಾಂಗ್ ಪರೀಕ್ಷೆಯ ಸಮಯ ಲ್ಯಾಬ್ ಎ ಕೇಂದ್ರದ ಸಿಸ್ಟಮ್ ಸಿ-018 ನೇದರಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದವನು ಆತನು ಮೊಬೈಲ್ ಪೋನ್ ಬಳಸಿ ಪರೀಕ್ಷಾ ಹಾಲ್ ನಲ್ಲಿ ಕಂಪ್ಯೂಟರ್ ಸಿಸ್ಟಮ್ ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ಆತನ ಮೊಬೈಲಿನಿಂದ ಪರೀಕ್ಷೆಯ ಪ್ರಶ್ನಾ ಪತ್ರಿಕೆಯ ಸಂಪೂರ್ಣ ಪೋಟೋ ತೆಗೆದು ಅದನ್ನು ಹೊರಗಡೆ ಕಳುಹಿಸಿ ಪ್ರಸಾರ ಮಾಡಲು ಯತ್ನಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿ.ಕೆ.ಮನೋಹರ್ ಕುಮಾರ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 03,04,10 The public Examinations (Prevention of unfair means )Act 2024 ರಂತೆ ಪ್ರಕರಣ ದಾಖಲಾಗಿದೆ.

error: No Copying!