images-17.jpeg
Spread the love

ಉಡುಪಿ: ದಿನಾಂಕ :01-04-2026 (ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಹಣಕ್ಕಾಗಿ ಮನೆಯಿಂದ ಹೊರಗೆ ಹಾಕಿ ಇದೀಗ ತವರು ಮನೆಗೆ ಬಂದು ಹಣಕ್ಕಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೋರ್ವರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಪು ತಾಲೂಕು, ಮಲ್ಲಾರು ಗ್ರಾಮದ ಮಜೂರು ಕೊಪ್ಪಲಂಗಡಿ ನಿವಾಸಿ ಸಹಾರ ಗಫೂರ್ (32) ಎಂಬವರಿಗೆ ದಿನಾಂಕ 06/01/2018 ರಂದು ಕಾಪು ಮಲ್ಲಾರು ಗ್ರಾಮದ 1 ನೇ ಆರೋಪಿತ ಉಮ್ಮರ್ ಫರೀದ್ ಎಂಬವರೊಂದಿಗೆ ಸಹಾರ ಗಫೂರ್ ರವರ ಮನೆಯಾದ ಸಹಾರ ಮಂಜಿಲ್ ನಲ್ಲಿ ಮದುವೆ ಆಗಿದ್ದು ಮದುವೆ ಸಮಯ ಆರೋಪಿತರು 15 ಲಕ್ಷ ರೂ ಹಣ ವರದಕ್ಷಿಣೆ ಹಾಗೂ 400 ಗ್ರಾಂ ಚಿನ್ನ ಕೇಳಿದ್ದು  ಸಹಾರ ಗಫೂರ್ ರವರ ಮನೆಯವರು 10 ಲಕ್ಷ ಹಣ ಹಾಗೂ 300 ಗ್ರಾಂ ಚಿನ್ನವನ್ನು ಕೊಟ್ಟಿರುತ್ತಾರೆ.

ಸಹಾರ ಗಫೂರ್ ರವರು ಮದುವೆ ನಂತರ ಗಂಡನ ಮನೆಗೆ ಹೋಗಿದ್ದು ಸ್ವಲ್ಪ ದಿನದ ನಂತರ 1 ನೇ ಆರೋಪಿತ ಉಮ್ಮರ್ ಫರೀದ್ ನು ಮದುವೆ ಸಮಯ ಚಿನ್ನ ಹಾಗೂ ಹಣ ಕಡಿಮೆ ಕೊಟ್ಟಿದ್ದೀರಿ ನಾವು ಹೇಳಿದ ಚಿನ್ನ ಹಾಗೂ ಹಣ ನಿನ್ನ ತಂದೆ ಮನೆಯಿಂದ ತೆಗೆದುಕೊಂಡು ಬಾ ಎಂದು ಹೇಳಿ ಸಹಾರ ಗಫೂರ್ ರಿಗೆ ಕೈಯಿಂದ ಕೆನ್ನೆಗೆ ಹೊಡೆದು, ಉಗುರಿನಿಂದ ಪರಚುವುದು, ಮತ್ತು ಕಾಲಿನಿಂದ ತುಳಿಯುವುದು ಮಾಡುತ್ತಿದ್ದನು.

ಅಲ್ಲದೇ 2. ಮೊಹಮ್ಮದ್ ಶರೀಫ್, 3.ಸೌಗುರಬಾನು, 4.ಆಶಾ ಫರಾನಾ ನೇ ಆರೋಪಿತರು ಸೇರಿ ಸಹಾರ ಗಫೂರ್ ರಿಗೆ  ಆವಾಚ್ಯವಾಗಿ ಬೈದು ವರದಕ್ಷಿಣೆ ಹಣವನ್ನು ತರುವಂತೆ ಒತ್ತಾಯ ಮಾಡುತ್ತಿದ್ದರು. 2 ನೇ ಆರೋಪಿತ ಮೊಹಮ್ಮದ್ ಷರೀಫ್ ನು 1 ನೇ ಆರೋಪಿತ ಉಮ್ಮರ್ ಫರೀದ್ ನಿಗೆ ನೀನು 2 ನೇ ಮದುವೆ ಮಾಡಿಕೊ ಎಂದು ಹೇಳುತ್ತಿದ್ದುದಲ್ಲದೇ ಸಹಾರ ಗಫೂರ್ ರಿಗೆ ನಿನ್ನ ತಾಯಿ ಮನೆಯವರು ರೌಡಿಗಳು ಎಂದು ಬೈಯ್ಯುತ್ತಿದ್ದರು.

1 ನೇ ಆರೋಪಿತ ಉಮ್ಮರ್ ಫರೀದ್ ನು ಮಕ್ಕಳನ್ನು ಶಾಲೆಗೆ ಸೇರಿಸದೇ ಇದ್ದು ಈ ವಿಚಾರವಾಗಿ ಸಹಾರ ಗಫೂರ್ ರು ವಿಚಾರಿಸಿದಾಗ ಆತನು ಹೆಂಡತಿ ಮತ್ತು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದ್ದು ರಾತ್ರಿ ಜಮಾತ್ ನವರು ವಿಷಯ ತಿಳಿದು ಮನೆಗೆ ಬಂದಾಗ ಮನೆಯ ಒಳಗೆ ಕರೆದುಕೊಂಡಿರುತ್ತಾರೆ.

ಮಾರನೇ ದಿನ ಸಹಾರ ಗಫೂರ್ ರವರ ಮನೆಯವರು ಬಂದು ಸಹಾರ ಗಫೂರ್ ರನ್ನು ಮತ್ತು ಮಕ್ಕಳನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದು ಸಹಾರ ಗಫೂರ್ ರವರು ತವರು ಮನೆಯಲ್ಲಿರುವಾಗ ಇತ್ತೀಚೆಗೆ 6 ತಿಂಗಳ ಹಿಂದೆ ಆರೋಪಿತರು ಸಹಾರ ಗಫೂರ್ ರ ಮನೆಗೆ ಬಂದು ಕೊಡಲು ಬಾಕಿ ಇರುವ ವರದಕ್ಷಿಣೆ ಹಣವನ್ನು ಕೊಡಿ, ಇಲ್ಲ ಅಂದರೆ ನಿಮ್ಮ ಮಕ್ಕಳನ್ನು ಶಾಲೆಗೆ ಹಾಕುವುದಿಲ್ಲ. ಹಣ ಕೊಡದೇ ಇದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಸಹಾರ ಗಫೂರ್ ರವರ ತಂದೆಗೆ ಬೆದರಿಕೆ ಹಾಕಿ ನೀವು ರೌಡಿಗಳು ಎಂದು ಬೈದಿರುತ್ತಾರೆ.

ಸಹಾರ ಗಫೂರ್ ರಿಗೆ ಮಾನಸಿಕ ಹಿಂಸೆಯನ್ನು ನೀಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಹಾರ ಗಫೂರ್ ತಿಳಿಸಿದ್ದಾರೆ.

ಈ ಬಗ್ಗೆ ಮಹಿಳಾ ಠಾಣೆಯಲ್ಲಿ  ಕಲಂ: 85, 352, 351(2), ಜೊತೆಗೆ 3(5) BNS ಮತ್ತು ಕಲಂ: 3,4 ಡಿಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

error: No Copying!