ಮಣಿಪಾಲ: ದಿನಾಂಕ:01-04-2026 (ಹಾಯ್ ಉಡುಪಿ ನ್ಯೂಸ್) ಕುಂದಾಪುರದ ನಿವಾಸಿ ವ್ಯಕ್ತಿ ಯೋರ್ವರನ್ನು ಕಾರೊಂದರಲ್ಲಿ ಬಂದ ತೆಲಂಗಾಣ ರಾಜ್ಯದ 8 ಜನರ ತಂಡವೊಂದು ಮಣಿಪಾಲದಲ್ಲಿ ಅಪಹರಣ ನಡೆಸಿರುವ ಘಟನೆ ನಡೆದಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ,ದಾಸರಮಕ್ಕಿ ಕೊಡ್ಲಾಡಿ ಗ್ರಾಮದ ನಿವಾಸಿ ರಾಮ ಮಡಿವಾಳ(32) ಅವರು ದಿನಾಂಕ 31/03/2026 ರಂದು ಅವರ ತಮ್ಮ ಲಕ್ಷ್ಮಣ ಎಂಬವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲ ಕೆಎಂಸಿ ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಆಸ್ಪತೆಯ ಹೊರಬದಿಯ ಕ್ಯಾಂಟಿನಿನಲ್ಲಿ ರಾಮ ಮಡಿವಾಳರು ಹಾಗೂ ಅವರ ಅಣ್ಣ ರಾಜೇಶ್ ಮತ್ತು ಸುದೀರ್ ಎಂಬವರು ಟೀ ಕುಡಿಯುತ್ತಿರುವಾಗ ಮದ್ಯಾಹ್ನ 12:15 ಗಂಟೆಗೆ ಒಂದು ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸೈಲ್ಟಾಸ್ ಕಾರಿನಲ್ಲಿ ಎಳೆಂಟು ಜನ ರಾಮ ಮಡಿವಾಳರ ಅಣ್ಣ ರಾಜೇಶ್ ನಲ್ಲಿದ್ದಲ್ಲಿಗೆ ಬಂದು ಏಕಎಕಿ ಹಿಡಿಯಲು ಹೋದಾಗ ರಾಮ ಮಡಿವಾಳರ ಅಣ್ಣ ತಪ್ಪಿಸಿಕೊಂಡರು ಸಹ ಅವರುಗಳು ಆತನನ್ನು ಹಿಡಿದು ಕಾರಿನಲ್ಲಿ ಕೂರಿಸಿಕೊಂಡು ಮಣಿಪಾಲದಿಂದ ಹಿರಿಯಡ್ಕ ಕಡೆ ರಸ್ತೆಯಲ್ಲಿ ಹೋಗಿರುತ್ತಾರೆ.
ಕಾರಿನಲ್ಲಿ ಬಂದ ವ್ಯಕ್ತಿಗಳು ರಾಮ ಮಡಿವಾಳರ ಅಣ್ಣನಾದ ರಾಜೇಶ್ ನೊಂದಿಗೆ ಈ ಹಿಂದೆ ವ್ಯವಹಾರದ ವಿಷಯದಲ್ಲಿ ಮನೆಗೆ ಬಂದಿದ್ದು ಅವರ ಹೆಸರು 1.ಮಲ್ಲಾರೆಡ್ಡಿ 2.ತುಳಜಾ 3.ನರಸಿಂಗ 4.ಹುಸೇನ್ 5.ಶಂಕರ 6.ನಾಗೇಶ್ 7.ಪರಮೇಶ್ವರ್ 8.ವಿಜಯ್ ಎಂಬವರಾಗಿದ್ದು ಪರಿಚಯವಿದ್ದು ಅವರೊಳಗಿನ ತೆಲಂಗಾಣದಲ್ಲಿರುವ ವ್ಯವಹಾರದ ವಿಷಯದಲ್ಲಿ ರಾಮ ಮಡಿವಾಳರ ಅಣ್ಣನನ್ನು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 140(2) 140(3) BNS ರಂತೆ ಪ್ರಕರಣ ದಾಖಲಾಗಿದೆ.
