IMG_20251125_233059.jpg
Spread the love

ಬೈಂದೂರು: ದಿನಾಂಕ:31-03-2026 (ಹಾಯ್ ಉಡುಪಿ ನ್ಯೂಸ್) ಹೇರೂರು ಗ್ರಾಮದ ಯರುಕೋಣೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸ್‌ ಠಾಣೆಯ ಪಿಎಸ್ಐ ಸುನೀಲ ಕುಮಾರ್ ಬಿ.ವೈ ಅವರು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್‌ ಠಾಣೆಯ ಪಿಎಸ್ಐ ಸುನೀಲ ಕುಮಾರ್ ಬಿ.ವೈ ಅವರಿಗೆ ದಿನಾಂಕ 30-06-2026 ರಂದು ಬೈಂದೂರು ತಾಲೂಕು ಹೇರೂರು  ಗ್ರಾಮದ  ಯರುಕೋಣೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಂದರ್‌ ಬಾಹರ್‌ ಜುಗಾರಿ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು ಆಗ ಕೂಡಲೇ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ಮಾಡಿದ್ದಾರೆ .

ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದ ಆಪಾದಿತ 1] ಲಕ್ಷ್ಮಣ ನಾಯ್ಕ (43) ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು, 2] ಉಮೇಶ ದೇವಾಡಿಗ (53) ನಾವುಂದ ಗ್ರಾಮ, ಬೈಂದೂರು ತಾಲೂಕು 3] ಶೀನ ಪೂಜಾರಿ (62) ಹೇರೂರು ಗ್ರಾಮ ಬೈಂದೂರು ತಾಲೂಕು 4) ಉದಯ ಶೆಟ್ಟಿ (60) ಹೇರೂರು ಗ್ರಾಮ, ಬೈಂದೂರು ತಾಲೂಕು ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಅವರಿಂದ ಇಸ್ಪೀಟ್‌ ಆಟಕ್ಕೆ ಬಳಸಿದ ಒಟ್ಟು ನಗದು ರೂಪಾಯಿ 2,560/- ಮತ್ತು 52 -ಇಸ್ಪೀಟ್‌ ಎಲೆಗಳು ,ಒಂದು ಬೆಡ್‌ ಸೀಟ್‌, ಒಂದು ನೋಟ್‌ ಪುಸ್ತಕ,  ಹಾಗೂ ಒಂದು ಬಾಲ್‌ ಪೆನ್‌ ಅನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ:87 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!