ಮಣಿಪಾಲ: ದಿನಾಂಕ : 31/03/2026 (ಹಾಯ್ ಉಡುಪಿ ನ್ಯೂಸ್) ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿಯ ರಿಕ್ಷಾ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನೋರ್ವ ನನ್ನು ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ರಾಮಪ್ರಭು ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ರಾಮಪ್ರಭು ರವರು ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 4:15 ಗಂಟೆಗೆ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಷನ್ ಸಮೀಪದ ರಿಕ್ಷಾ ನಿಲ್ದಾಣದ ಬಳಿ ಒಬ್ಬ ವ್ಯಕ್ತಿ ಕತ್ತಲಲ್ಲಿ ನಿಂತಿರುವುದು ಕಂಡು ಬಂದಿದ್ದು, ಸಮವಸ್ತ್ರದಲ್ಲಿರುವ ಪೊಲೀಸರನ್ನು ನೋಡಿ ಆತನು ಅಡಗಿ ಕುಳಿತಿದ್ದು ಪೊಲೀಸರು ಆತನ ಸಮೀಪಕ್ಕೆ ಹೋದಾಗ ಆತನು ಕೂಡಲೇ ಮರೆಯಲ್ಲಿ ಕತ್ತಲೆಯ ಜಾಗಕ್ಕೆ ಹೋಗಿ ಅಡಗಿಕೊಂಡಿದ್ದವನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಮಹೇಶ್, (29) ತಂದೆ:ತುಕರಾಮ, ವಿಳಾಸ:ನಾಗಪುರ ಯೋತಮಲ್ ತಾಲೂಕು ಮಹಾರಾಷ್ಟ್ರ. ಎಂಬುದಾಗಿ ತಿಳಿಸಿದ್ದು, ಹಾಗೂ ಆತನನ್ನು ಪರಿಶೀಲಿಸಿದಾಗ ಆತನ ಕೈಯಲ್ಲಿ ಆಕಾಶ ನೀಲಿ ಬಣ್ಣದ Apple ಕಂಪನಿಯ Iphone ಇದ್ದು ಅದು ಲಾಕ್ ಆಗಿದ್ದು ಅದರ ಸಿಮ್ ಕಾರ್ಡ್ ನಂಬರ್ ತಿಳಿದಿಲ್ಲವಾಗಿ ತಿಳಿಸಿರುತ್ತಾನೆ.
ಆತನು ಅವಿತು ಕೊಂಡಿದ್ದೇಕೆ ಎಂಬ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇರುವುದರಿಂದ ಆತನು ಯಾವುದೋ ಅಪರಾಧ ನಡೆಸಲು ಸಂಚರಿಸಿಕೊಂಡಿರುವ ಬಗ್ಗೆ ಬಲವಾದ ಅನುಮಾನ ಬಂದಿರುವುದರಿಂದ ಆತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 98 KP ACT ರಂತೆ ಪ್ರಕರಣ ದಾಖಲಾಗಿದೆ.
