ಕೋಟ : ಮೇ ೧೨ (ಹಾಯ್ ಉಡುಪಿ ನ್ಯೂಸ್) ಕುಡುಕ ಅಳಿಯನೋರ್ವ ಅತ್ತೆಗೆ ಮತ್ತು ಹೆಂಡತಿಗೆ ಜೀವ ಬೆದರಿಕೆ ಹಾಕಿ ದ ಘಟನೆ ನಡೆದಿದೆ.
ಕುಂದಾಪುರ ತಾಲೂಕು ,ಮತ್ಯಾಡಿ ಗ್ರಾಮ , ಗುಡ್ಡೆಯಂಗಡಿ ಯಡಾಡಿ,ಹಳ್ನೀರು ಎಂಬಲ್ಲಿ ವಾಸವಾಗಿರುವ ಬಾಬಿ (43) ಯವರು ಮಗಳು ಚೈತ್ರಾ ಹಾಗೂ ಮೊಮ್ಮಗ ನಿವೇದನ ಜೊತೆಯಲ್ಲಿ ವಾಸವಾಗಿದ್ದು, ಬಾಬಿಯವರ ಮಗಳನ್ನು ವಿಜಯ ಎಂಬುವವನಿಗೆ 7 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು, ಈ ಹಿಂದೆ ಬಾಬಿಯವರು ಮಗಳು ಮನೆಗೆ ಬಂದಾಗ ಅಳಿಯ ವಿಜಯನು ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಅಲ್ಲದೆ ಮಗಳಿಗೂ ತೊಂದರೆ ಕೊಡುತ್ತಿದ್ದನು ಎಂದಿದ್ದಾರೆ.. 1 ½ ವರ್ಷದಿಂದ ಮಗಳು ಮನೆಯಲ್ಲಿಯೇ ಇದ್ದು, ವಿಜಯನು ದಾರವಾಢದಲ್ಲಿ ಹೋಟೇಲ್ ಮಾಡಿಕೊಂಡಿರುತ್ತಾನೆ. ವಿಜಯನು ಆಗಾಗ ಬಾಬಿ ಯವರ ಮನೆಗೆ ಬಂದು ಬಾಬಿಯವರಿಗೆ ಬೈದು, ಜೀವ ಬೆದರಿಕೆ ಹಾಕುತ್ತಿದ್ದನೆಂದೂ, ದಿನಾಂಕ 09/05/2022 ರಂದು 7:30 ಗಂಟೆ ಸಮಯಕ್ಕೆ ವಿಜಯನು ಕುಡಿದು ಬಂದು ಬಾಬಿಯವರ ಮನೆಗೆ ಅಕ್ರಮ ಪ್ರವೇಶ ಮಾಡಿ ಬಾಬಿಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಅಲ್ಲದೆ ದಿನಾಂಕ 10/05/2022 ರಂದು ಬೆಳಿಗ್ಗೆ 07:00 ಗಂಟೆಗೆ ಬಾಬಿ ಯವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಲ್ಲದೆ ದಿನಾಂಕ 11/05/2022 ರಂದು 5:00 ಗಂಟೆಗೆ ಇದೇ ರೀತಿ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಬಾಬಿ ಯವರನ್ನು ಕೊಲೆ ಮಾಡುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾನೆ. ಇದರಿಂದ ಬಾಬಿಯವರು ಮನೆಯಲ್ಲಿರಲು ಭಯಭೀತರಾಗಿರುತ್ತೇವೆ ಎಂದು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.