ಉಡುಪಿ:ಮೇ ೧೧ (ಹಾಯ್ ಉಡುಪಿ ನ್ಯೂಸ್) ಗಿರಾಕಿಗಳಂತೆ ಬಂದು ಗೂಡಂಗಡಿ ಮಾಲಕರ ಹಣ ಎಗರಿಸಿದ ಘಟನೆ ನಡೆದಿದೆ.
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಜಿಎಂ ಕಾಲೇಜು ಬಳಿಯ ಕೆ.ಇ.ಬಿ ಕ್ವಾಟ್ರಸ್ ಎದುರು ಗೂಡಂಗಡಿ ನಡೆಸಿಕೊಂಡಿರುವ ತುಕ್ರ ಮೂಲ್ಯ ಇವರ ಗೂಡಂಗಡಿಗೆ ದಿನಾಂಕ 10/05/2022 ರಂದು 2:55 ಗಂಟೆಗೆ ಇಬ್ಬರು ಅಪರಿಚಿತರು ಗಿರಾಕಿಗಳಾಗಿ ಬಂದು ಕ್ಯಾಶ್ ಬಾಕ್ಸ್ ನಲ್ಲಿ ಇಟ್ಟಿದ್ದ ಬ್ಯಾಗ್ ಅನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬ್ಯಾಗ್ ನಲ್ಲಿ ರೂ. 13,000/- ನಗದು, ಪಾನ್‌ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ, ಚೆಕ್‌ಬುಕ್, ಆರ್‌ಸಿ, ಡಿಎಲ್, ವಿಮೆಪತ್ರ ಹಾಗೂ ಎಫ್.ಡಿ ಬಾಂಡ್ ಇತ್ತು ಎಂದು ದೂರು ನೀಡಲಾಗಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.