ಕುಂದಾಪುರ:ಮೇ ೧೧( ಹಾಯ್ ಉಡುಪಿ ನ್ಯೂಸ್) ಶಿಕ್ಷಣ ಸಂಸ್ಥೆಯೊಂದರ ಆವರಣ ಗೋಡೆ ಕೆಡವಲು ಬಂದವರು ಪರಿಶಿಷ್ಟ ಜಾತಿಯ ಯುವತಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದವರಾದ ಕುಮಾರಿ ವೀಣಾ ಅಗೇರ ಅವರು ಕುಂದಾಪುರ ಕಸಬಾ ಗ್ರಾಮದ ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ಹಾಗೂ ಬ್ಯಾರೀಸ್ ಬಾಲಕಿಯರ ವಸತಿ ನಿಲಯ, ಕೋಡಿ ಇದರ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.. ದಿನಾಂಕ 09-05-2022 ರಂದು 04:30 ಘಂಟೆಗೆ ಫಿರೋಜ್ ( 25 ) , ಸಲೀಂ ಮಲ್ಲಿಕ್ ( 28 ) ಇವರುಗಳು ಬ್ಯಾರೀಸ್ ವಿದ್ಯಾಸಂಸ್ಥೆಯ ಆವರಣ ಗೋಡೆಯನ್ನು ಕೆಡವುತ್ತಿದ್ದಾರೆಂದು ವಿದ್ಯಾ ಸಂಸ್ಥೆಯ ಭದ್ರತಾ ಸಿಬ್ಬಂದಿ ಮನೀಷ್ ರಾಯ್ ರವರು ಕುಮಾರಿ ವೀಣಾ ರವರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕೆ ಭೇಟಿ ನೀಡಿ ವೀಣಾ ರವರು ಆವರಣ ಗೋಡೆ ಯಾಕೆ ಕೆಡವುತ್ತಿದ್ದೀರಿ ಎಂದು ವಿಚಾರಿಸಿದಾಗ ಫಿರೋಜ್ ಮತ್ತು ಸಲೀಂ ಮಲ್ಲಿಕ್ ವೀಣಾ ರವರನ್ನು ಉದ್ದೇಶಿಸಿ ಪರಿಶಿಷ್ಟ ಜಾತಿಯವರೆಂದು ತಿಳಿದೂ ,ಅವಾಚ್ಯವಾಗಿ ಬೈದು ನಿನಗ್ಯಾಕೆ ಅಧಿಕ ಪ್ರಸಂಗತನ ಎಂದು ಜಾತಿ ನಿಂದನೆ ಮಾಡಿ ಫಿರೋಜ್ ನು ವೀಣಾರವರ ಮೇಲೆ ಕೈ ಹಾಕಿ ಎಳೆದಿರುತ್ತಾನೆ ಎನ್ನಲಾಗಿದೆ. ಈ ಕೃತ್ಯವು ಹಂಝಾ ಮೊಹಮ್ಮದ್, ಮನೀಷ್ ರಾಯ್, ಡಾ ಉಷಾರಾಣಿ ಯವರ ಎದುರಲ್ಲೇ ನಡೆದಿದ್ದು ಫಿರೋಜ್ ಮತ್ತು ಸಲೀಂ ಮಲ್ಲಿಕ್ ಬ್ಯಾರೀಸ್ ವಿದ್ಯಾಸಂಸ್ಥೆಯ ಸ್ಥಿರಾಸ್ಥಿಯಲ್ಲಿ ಸುಳ್ಳು ಹಕ್ಕು ಸ್ಥಾಪಿಸುವ ದುರುದ್ದೇಶ ಹೊಂದಿದವರಾಗಿದ್ದು ಇದೇ ಉದ್ದೇಶದಿಂದ ದುಷ್ಕೃತ್ಯ ಎಸಗಿರುತ್ತಾರೆ ಎಂದು ದೂರು ನೀಡಲಾಗಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.