images-1.jpeg
Spread the love

ಕೋಟ: ದಿನಾಂಕ:25-03-2026(ಹಾಯ್ ಉಡುಪಿ ನ್ಯೂಸ್) ‌ಸಾಸ್ತಾನ ಟೋಲ್ ಪ್ಲಾಜಾ ದಲ್ಲಿ ಕಾರೊಂದರಲ್ಲಿ ಬಂದ ಮೂವರು ವ್ಯಕ್ತಿಗಳು ಟೋಲ್ ಸಿಬ್ಬಂದಿಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ಸಾಸ್ತಾನದ ಯೋಗೀಶ್ ಕುಮಾರ್ (42) ಎಂಬವರು ಕಳೆದ 08 ವರ್ಷಗಳಿಂದ ಸಾಸ್ತಾನ ಟೋಲ್ ಪ್ಲಾಜಾ ದಲ್ಲಿ ಅಸಿಸ್ಟಂಟ್ ಟೋಲ್ ಪ್ಲಾಜಾ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 24/03/2026 ರಂದು ರಾತ್ರಿ ಯೋಗೀಶ್ ಕುಮಾರ್ ರವರು ಸಾಸ್ತಾನ ಟೋಲ್ ನಲ್ಲಿ ಕೆಲಸದಲ್ಲಿರುವ ಸಮಯ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುವ ಒಂದು ಬಸ್ ಟೋಲ್ ನಲ್ಲಿ ಹಣವನ್ನು ಕಟ್ಟುತ್ತಿರುವಾಗ ಅದರ ಹಿಂದೆ KA-54-6555 ನೇ ಹೋಂಡಾ ಅಮೇಜ್ ಕಾರ್ ಒಂದು ಬಂದಿದ್ದು ಅದರಲ್ಲಿ 3 ಜನ ವ್ಯಕ್ತಿಗಳು ಇದ್ದಿರುತ್ತಾರೆ.

ಅದರಲ್ಲಿದ್ದ ವೆಂಕಟೇಶ ಪ್ರಸಾದ್ ಎಂಬಾತನು ಕಾರಿನಿಂದ ಇಳಿದು ಟೋಲ್ ಗೇಟ್ ಬಳಿ ಬಂದು ಕಾರ್ ಬಿಡಲು ಯಾಕೆ ಲೇಟ್ ಮಾಡುತ್ತೀರಾ ಎಂದು ಟೋಲ್ ಬ್ಯಾರೇರ್ ಗೆ ಒದ್ದು ಟೋಲ್ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಸಿಬ್ಬಂದಿಗಳನ್ನು ಕೈ ಯಿಂದ ದೂಡಿರುತ್ತಾನೆ.ನಂತರ ಕಾರಿನಲ್ಲಿದ್ದ ವಿನಾಯಕ್ ಎಂಬಾತನು ಒಂದು ಕಬ್ಬಿಣದ ರಾಡ್ ನ್ನು ತೆಗೆದುಕೊಂಡು ಬಂದು ಅದರಿಂದ ಹೊಡೆದರೆ ಸಾವನ್ನಪ್ಪುತ್ತಾರೆ ಎಂದು ಜ್ಞಾನವಿದ್ದರೂ ಸಿಬ್ಬಂದಿಗಳಿಗೆ ಹೊಡೆಯಲು ಪ್ರಯತ್ನಿಸಿದ್ದು,ಆಗ ಸಿಬ್ಬಂದಿಗಳು ತಪ್ಪಿಸಿಕೊಂಡಿದ್ದು ,ಒಂದು ವೇಳೆ ಸಿಬ್ಬಂದಿಗಳು ತಪ್ಪಿಸಿಕೊಳ್ಳದಿದ್ದರೆ ಅವರು ಮರಣ ಹೊಂದುತ್ತಿದ್ದರು.

ಕೂಡಲೇ ಸ್ಥಳದಲ್ಲಿದ್ದ ಯೋಗೀಶ್ ಕುಮಾರ್ ರವರು ಅವರ ಬಳಿ ಹೋಗಿ ಅವರನ್ನು ತಡೆದಿದ್ದು . ನಂತರ ಆರೋಪಿಗಳು ಬಂದ ಕಾರನ್ನು ಧನುಷ ಎಂಬಾತನು ಸ್ಥಳದಿಂದ ತೆಗೆದುಕೊಂಡು ಓಡಿ ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಯೋಗೀಶ್ ಕುಮಾರ್ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 115(2), 352, 110 ಜೊತೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!