ಕಾಪು: ದಿನಾಂಕ:25-03-2026(ಹಾಯ್ ಉಡುಪಿ ನ್ಯೂಸ್) ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕಾಪುವಿನ ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮ ದೇವಿಗೆ ಸುಗ್ಗಿ ಮಾರಿ ಪೂಜೆಯು ವೈಭವ ದಿಂದ ನೆರವೇರಿತು. ನಿನ್ನೆ ಮತ್ತು ಇವತ್ತು ಸಹಸ್ರಾರು ಜನರು ದೇವಿಯ ದರ್ಶನ ಪಡೆದು ತಮ್ಮ ಹರಕೆಗಳನ್ನು ಸಮರ್ಪಿಸಿದರು. ಭಕ್ತಾದಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿ ಉತ್ತಮ ವ್ಯವಸ್ಥೆಯನ್ನು ಮಾಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.



