ಶಂಕರನಾರಾಯಣ: ದಿನಾಂಕ 25/03/2026 (ಹಾಯ್ ಉಡುಪಿ ನ್ಯೂಸ್)ಹೆಂಗವಳ್ಳಿ ಗ್ರಾಮದ ತೊಂಬತ್ತು ಶಾಲಿಗುಡ್ಡೆ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಎಸ್ ಎನ್ ಅವರು ಬಂಧಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ತನಿಖೆ) ಅಕ್ಷಯ ಕುಮಾರಿ ಎಸ್ ಎನ್ ಅವರಿಗೆ ದಿನಾಂಕ:24-03-2026 ರಂದು ಹೆಂಗವಳ್ಳಿ ಗ್ರಾಮದ ತೊಂಬತ್ತು ಶಾಲಿಗುಡ್ಡೆ ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಓರ್ವ ಮಹಿಳೆ ಅಕ್ರಮವಾಗಿ ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಪಿಎಸ್ಐ ಅವರು ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಮಾಹಿತಿ ಬಂದ ಸ್ಥಳಕ್ಕೆ ತಲುಪಿದಾಗ ಸ್ಥಳದಲ್ಲಿ ಓರ್ವ ಮಹಿಳೆಯು ಒಂದು ರಟ್ಟಿನ ಬಾಕ್ಸನ್ನು ಇಟ್ಟುಕೊಂಡು ಗಿರಾಕಿಗಳಿಗೆ ಕಾಯುತ್ತಿರುವುದು ಕಂಡು ಬಂದಿದ್ದು ಪೊಲೀಸರು ದಾಳಿಮಾಡಿದಾಗ ಆ ಮಹಿಳೆಯ ಬಳಿ ಒಂದು ರಟ್ಟಿನ ಬಾಕ್ಸ್ ಇದ್ದು ಅದನ್ನು ಪರಿಶೀಲಿಸಿದಾಗ ಬಾಕ್ಸ್ ನಲ್ಲಿ Original Choice ಎಂದು ಬರೆದಿರುವ 90 MLನ ಮದ್ಯ ತುಂಬಿದ 41 ಟೆಟ್ರಾ ಪ್ಯಾಕೇಟ್ ಗಳಿದ್ದು, ಒಂದು ಟೆಟ್ರಾ ಪ್ಯಾಕ್ ಬೆಲೆ 50/-ರೂ ಆಗಿದ್ದು, 41 ಟೆಟ್ರಾ ಪ್ಯಾಕೇಟ್ ಬೆಲೆ 2050/- ಆಗಿರುತ್ತದೆ, 41 ಟೆಟ್ರಾ ಪ್ಯಾಕೇಟ್ ನ ಮಧ್ಯದ ಪ್ರಮಾಣ 3.69 ಲೀಟರ್ ಆಗಿರುತ್ತದೆ, ಮದ್ಯ ಮಾರಾಟ ಮಾಡುತ್ತಿದ್ದ ಹೆಂಗಸಿನ ಹೆಸರು, ವಿಳಾಸ ವಿಚಾರಿಸಿದಾಗ ರೇವತಿ ಶೆಡ್ತಿ (42), ತೊಂಬತ್ತು, ಹೆಂಗವಳ್ಳಿ ಗ್ರಾಮ ಎಂಬುದಾಗಿ ತಿಳಿಸಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ಪರವಾನಿಗೆ ಇದೆಯೇ ಎಂಬುದಾಗಿ ವಿಚಾರಿಸಿದಾಗ ತನ್ನ ಬಳಿ ಯಾವುದೇ ಪರವಾನಿಗೆ ದಾಖಲಾತಿ ಇರುವುದಿಲ್ಲವಾಗಿ ತಿಳಿಸಿದ್ದು ಪೊಲೀಸರು ಮಹಿಳೆಯನ್ನು ಬಂಧಿಸಿ ಮದ್ಯದ ಪ್ಯಾಕೇಟನ್ನು ಸ್ವಾಧಿನಪಡಿಸಿಕೊಂಡಿದ್ದಾರೆ.
ಆರೋಪಿ ಮಹಿಳೆ ರೇವತಿ ಶೆಡ್ತಿಯು ಯಾವುದೇ ಪರವಾನಿಗೆ ಇಲ್ಲದೇ ತನ್ನ ಸ್ವಂತ ಲಾಭಕ್ಕಾಗಿ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ಮಧ್ಯದ ಟೆಟ್ರಾ ಪ್ಯಾಕೇಟನ್ನು ಸ್ವಾದೀನದಲ್ಲಿ ಇಟ್ಟುಕೊಂಡಿದ್ದಳು ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
