ಉಡುಪಿ:ಮೇ೧೦(ಹಾಯ್ ಉಡುಪಿ ನ್ಯೂಸ್) ಇದೇ ತಿಂಗಳು 21 ಮತ್ತು 22ಕ್ಕೆ ನಡೆಯಲಿರುವ ಸಿಇಟಿ ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಇದೇ ತಿಂಗಳ 21 ಮತ್ತು 22ಕ್ಕೆ CET ಪರೀಕ್ಷೆ ನಿಗದಿಯಾಗಿದೆ. ಆದರೆ ಇನ್ನೂ ಸಹ ಪರೀಕ್ಷೆಗೆ ಕುಳಿತುಕೊಳ್ಳುವವರಿಗೆ ಸಮಯಾವಕಾಶದ ಕೊರತೆಯಿಂದಾಗಿ ಸಿಲೆಬಸ್ ಓದಿ ಆಗಿಲ್ಲ. ಓದಿಯಾಗದ ಕಾರಣಕ್ಕೆ ಅನೇಕರು ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ. ಹತಾಶೆಗೂ ಒಳಗಾಗಿದ್ದಾರೆ. ಕನಿಷ್ಟ ಒಂದು ತಿಂಗಳ ಮಟ್ಟಿಗಾದರೂ CET ಪರೀಕ್ಷೆಯನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ರಾಜ್ಯ ಸರಕಾರ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಹಾಗೂ ಸಿಇಟಿ ಪರೀಕ್ಷೆಗೆ ಕುಳಿತವರ ಹಿತದೃಷ್ಟಿಯಿಂದ ಸಿಇಟಿ ಪರೀಕ್ಷೆ ಯನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡ ಬೇಕು.ಈ ಮೂಲಕ ಮಕ್ಕಳ ಹಿತದೃಷ್ಟಿಯಿಂದ , ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಲ್ಲರ ಆಗ್ರಹವಾಗಿದೆ.