images-16.jpeg
Spread the love

ಶಿರ್ವ: ದಿನಾಂಕ:21-03-2026 (ಹಾಯ್ ಉಡುಪಿ ನ್ಯೂಸ್) ಪಿಲಾರಖಾನ ನಿವಾಸಿ ಮಹಿಳೆಯೋರ್ವರಿಗೆ ಅವರ ಮಾವನ ತಂಗಿ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಶಿರ್ವ ಗ್ರಾಮದ ಪಿಲಾರಖಾನ ರಸ್ತೆ ನಿವಾಸಿ ಅರ್ಪಿತಾ ವಿಜಯ ಫೆರಾವೋ,(31) ಎಂಬವರು ದಿನಾಂಕ:20.03.2026 ರಂದು ಶಿರ್ವ ದಲ್ಲಿರುವಾಗ ಮದ್ಯಾಹ್ನ  ಅರ್ಪಿತಾ ವಿಜಯ ಫೆರಾವೋ ಅವರ ಮಾವನ ತಂಗಿ ಹಿಲ್ಡಾ ನಜರತ್‌ ಮತ್ತು ಜೋಸೆಫ್‌ ಡಿಕ್ರುಸ್‌  ಎಂಬವರು ಆಟೋರಿಕ್ಷಾದಲ್ಲಿ ಬಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಮ್ಮ ಜಾಗದಲ್ಲಿ ಬೆಳೆ ಬೆಳೆಯುತ್ತಿದ್ದೀಯಾ ನೀನು ಕೀಳು ಜಾತಿಯವಳು ನಿನ್ನಂತವಳು ಬಂದು ಈ ಮನೆಯಲ್ಲಿದ್ದೀಯಾ ನೀನು ಕೀಳು ಜಾತಿಗೆ ಸೇರಿದ ವಡ್ಡರ ಜಾತಿಯವಳು ನೀನು ಎಸ್‌ ಸಿ ಜಾತಿಗೆ ಸೇರಿದ ಕೀಳು ಅಂತಾ ಬೈದು ಸಾರ್ವಜನಿಕವಾಗಿ ಜನರ ಮುಂದೆ ನನ್ನ ಅವಮಾನಿಸಿ ಬೈದು ಜೀವ ಬೆದರಿಕೆ ಹಾಕಿದ್ದು ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ನಿನ್ನ ನಾನು ತೆಗಿತೀನಿ ಅಂತ ಹೇಳಿದ್ದಾಳೆ ಇದರ ಮುಂಚೆ ನನ್ನ ಅತ್ತೆಗೆ ಹೊಡೆದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಅರ್ಪಿತಾ ವಿಜಯ ಫೆರಾವೋ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ  ಕಲಂ:352, 351(2) ಬಿಎನ್‌ಎಸ್‌ 2023 ಮತ್ತು ಕಲಂ 3(1)(r)(s), 3(2)(v-a) SC and ST Act ರಂತೆ ಪ್ರಕರಣ ದಾಖಲಾಗಿದೆ.

error: No Copying!