IMG-20251216-WA0102.jpg
Spread the love

ಉಡುಪಿ: ದಿನಾಂಕ:21-03-2026 (ಹಾಯ್ ಉಡುಪಿ ನ್ಯೂಸ್) ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡ‌ರ್ ಕೊರತೆ ನೀಗಿಸುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಅವರು ಆಗ್ರಹಿಸಿದ್ದಾರೆ.

ಇರಾನ್‌-ಇಸ್ರೇಲ್ – ಅಮೆರಿಕದ ನಡುವೆ ನಡೆಯುತ್ತಿರುವ ನಿರಂತರ ಯುದ್ಧದಿಂದ ಉಡುಪಿ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರಿನ ಸಮಸ್ಯೆ ಉಲ್ಬಣಿಸುತ್ತಿದೆ. ಸಾಮಾನ್ಯ ಜನರ ಜೀವನಕ್ಕೂ ಇದರ ಬಿಸಿ ತಟ್ಟುತ್ತಿದೆ. ಈವರೆಗೆ ಗೃಹ ಬಳಕೆಯ ಸಿಲಿಂಡ‌ರ್ ಆದರೂ ಸಿಗುತ್ತಿತ್ತು. ಈಗ ಅದರ ಲಭ್ಯತೆಯು ಇಲ್ಲದಂತಾಗಿ ಜನಸಾಮಾನ್ಯರು ಸಹ ಅಡುಗೆ ಮಾಡಲಾಗದೆ ಪರಿತಪಿಸುವಂತಾಗಿದೆ.

ಸಣ್ಣ ಹೋಟೆಲ್‌ಗಳು, ದೊಡ್ಡ ಹೋಟೆಲ್‌ಗಳು,ಸ್ವಂತ ಮನೆಯಲ್ಲಿ ವಾಸಿಸುವವರು, ಬಾಡಿಗೆ ಮನೆಯಲ್ಲಿರುವವರು, ಜನಸಾಮಾನ್ಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಸಹ ಸಿಲಿಂಡರಿನ ಸಮಸ್ಯೆಗೆ ಸಿಲುಕಿದ್ದಾರೆ. ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.

ವರ್ಷವೂ ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ, ವಿವಾಹ ಮುಂತಾದ ಸಮಾರಂಭ ನಡೆಯುವ ಕಾಲವಾಗಿದ್ದು, ಈಗ ಅದಕ್ಕೂ ಅನಿಲ ಪೂರೈಕೆಯ ಸಮಸ್ಯೆಯಾಗಿದ್ದು ಅತ್ಯಂತ ಖಂಡನೀಯವಾಗಿದೆ. ಹಾಗೂ
ಸಾರ್ವಜನಿಕರು ಯಾವುದೇ ಸಭೆ ಸಮಾರಂಭವವನ್ನು ನಡೆಸಲಾಗದೆ ಗ್ಯಾಸ್ ಸಿಲಿಂಡರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಸೂಕ್ತ ಗಮನಹರಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಅವರು ವಿನಂತಿಸಿ ಕೊಂಡಿದ್ದಾರೆ.

error: No Copying!