ಮಲ್ಪೆ: ಮೇ ೧೦ (ಹಾಯ್ ಉಡುಪಿ ನ್ಯೂಸ್) ಹವಾಮಾನ ವೈಪರೀತ್ಯವಿದೆ.ಬೀಚ್ ಗೆ ಇಳಿಯಬೇಡಿ ಎಂದು ವಿನಂತಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳನ್ನೇ ಪ್ರವಾಸಿಗರು ಥಳಿಸಿದ ಘಟನೆ ನಡೆದಿದೆ.
ಸುಜಾತ ಹೋಟೆಲ್ ಹತ್ತಿರ ,ತೊಟ್ಟಂ ,ಬಡನಿಡಿಯೂರು ನಿವಾಸಿ ಮಹೇಶ (೪೨)ಇವರು ಮಲ್ಪೆ ಬೀಚ್‌ನಲ್ಲಿ ಲೈಫ್ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು, ಉಡುಪಿ ಜಿಲ್ಲಾಧಿಕಾರಿಯವರು 2 ದಿನಗಳಿಂದ ಹವಾಮಾನ ವೈಪರಿತ್ಯದಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು ಪ್ರವಾಸಿಗರು ಸಮುದ್ರದ ನೀರಿಗೆ ಇಳಿಯದಂತೆ ಸೂಚನೆ ನೀಡಿರುತ್ತಾರೆ. ದಿನಾಂಕ 09/05/2022 ರಂದು 3:30 ಗಂಟೆಗೆ ಸುಮಾರು 5 ರಿಂದ 6 ಜನ ಪ್ರವಾಸಿಗರು ಮಲ್ಪೆ ಬೀಚ್ ಲೈಫ್ ಗಾರ್ಡ್ ಗಳ ಮಾತನ್ನು ಲೆಕ್ಕಿಸದೆ ನೀರಿಗೆ ಇಳಿಯುತ್ತಿದ್ದು , ಪ್ರವಾಸಿಗರಿಗೆ ತಿಳಿ ಹೇಳಿದರೂ ಕೂಡ ನಾವು ತುಂಬಾ ದೂರದಿಂದ ಬಂದಿದ್ದೇವೆ ನಾವು ಯಾಕೆ ನೀರಿಗೆ ಇಳಿಯಬಾರದು ಎಂದು ಉಡಾಫೆಯಿಂದ ಹೇಳಿ ನಾವು ನೀರಿಗೆ ಇಳಿಯುತ್ತೇವೆ ನೀವು ಮಾಡುವುದೆಲ್ಲಾ ಮಾಡಿ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಮಹೇಶ್ ಹಾಗೂ ಸಹೋದ್ಯೋಗಿ (ಲೈಫ್ ಗಾರ್ಡ್) ಗಳಾದ ನಾಗರಾಜ, ಅಭಯ್ , ರಾಜೇಶ್, ಇವರಿಗೆ 5-6 ಜನ ಪ್ರವಾಸಿಗರು ಸೇರಿಕೊಂಡು ಕೈಯಿಂದ ಹಿಗ್ಗಾಮುಗ್ಗಾ ಥಳಿಸಿ ಕೆಳಗೆ ದೂಡಿ ಹಾಕಿ ಕಾಲಿನಿಂದ ತುಳಿದಿರುತ್ತಾರೆ, ಅಲ್ಲಿ ಸೇರಿದವರು ಈ ಗಲಾಟೆಯನ್ನು ಬಿಡಿಸಿದ್ದು, ಗಲಾಟೆಯಿಂದ ಪೆಟ್ಟಾದ ಲೈಫ್ ಗಾರ್ಡ್ ಗಳಾದ ನಾಗರಾಜ, ಅಭಯ್ , ರಾಜೇಶ್ ಇವರುಗಳನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.