images-17.jpeg
Spread the love

ಶಂಕರನಾರಾಯಣ: ಬೆಳ್ವೆ ಗ್ರಾಮದ ಸುರ್ಗೋಳಿ ಎಂಬಲ್ಲಿನ ಸರ್ಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐವರನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಎಸ್ ಎನ್ ಅವರು ಬಂಧಿಸಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ. ಎಸ್‌ ಎನ್‌  ಅವರು  ಠಾಣೆಯಲ್ಲಿರುವಾಗ  ಬೀಟ್‌ ಸಿಬ್ಬಂದಿಯವರಾದ ಜಯರಾಮ್‌ ನಾಯ್ಕ ರವರು ಕರೆಮಾಡಿ ಬೆಳ್ವೆ ಗ್ರಾಮದ ಸುರ್ಗೋಳಿ ಎಂಬಲ್ಲಿ ವಸಂತ ಪೂಜಾರಿ ಎಂಬವರ ಮನೆಯ ಪಕ್ಕದ ಸರ್ಕಾರಿ ಹಾಡಿಯಲ್ಲಿ ಐದಾರು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್‌-ಬಾಹರ್‌ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ನೀಡಿದ್ದು ಅದರಂತೆ ಮಾಹಿತಿ  ಬಂದ ಸ್ಥಳಕ್ಕೆ ದಾಳಿನಡೆಸಲು  ಬೆಳ್ವೆ ಗ್ರಾಮದ ಸುರ್ಗೋಳಿಗೆ ಕೂಡಲೇ ತಲುಪಿದ್ದಾರೆ .

ಮಾಹಿತಿ ಬಂದ ಸ್ಥಳಕ್ಕೆ ತಲುಪಿದಾಗ ಅಲ್ಲಿ ಆರು ಜನರು ನೆಲದ ಮೇಲೆ ಚಾಪೆಯನ್ನು  ಹಾಸಿಕೊಂಡು ವೃತ್ತಾಕಾರದಲ್ಲಿ ಅದರ ಸುತ್ತ ಕುಳಿತುಕೊಂಡಿದ್ದು ಅವರ ಮಧ್ಯದಲ್ಲಿದ್ದ ಓರ್ವ ವ್ಯಕ್ತಿ ಒಳಗಡೆ 100 ಹೊರಗಡೆ 100 ಎಂದು ಕೂಗಿ ಹೇಳಿ ನೆಲಕ್ಕೆ ಹಾಸಿದ್ದ ಚಾಪೆಯ ಮೇಲೆ ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು, ಸುತ್ತಲೂ ಕುಳಿತ್ತಿದ್ದವರು 100 ಹೊರಗೆ 100 ಒಳಗೆ ಎಂದು ಹೇಳಿ ಹಣವನ್ನು ಹಾಕುತ್ತಿದ್ದರು, ಅವರುಗಳು ಅಂದರ್‌ – ಬಾಹರ್‌ ಇಸ್ಪೀಟ್ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರು ದಾಳಿ ನಡೆಸಿದ್ದಾರೆ .

ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ 5 ಜನರನ್ನು ಸುತ್ತುವರಿದು ಹಿಡಿದು ಬಂಧಿಸಿ ಅವರ ಹೆಸರು ವಿಳಾಸವನ್ನು ವಿಚಾರಣೆ ನಡೆಸಿದಾಗ 1) ಡ್ಯಾನೀಶ್ ನೊರೋನಾ ಪ್ರಾಯ 61 ವರ್ಷ, ಕುಚ್ಚೂರು ಗ್ರಾಮ, ಹೆಬ್ರಿ ತಾಲೂಕು, 2) ರಾಘವೇಂದ್ರ ಪೂಜಾರಿ ಪ್ರಾಯ 38 ವರ್ಷ, ಹೆಂಗವಳ್ಳಿ ಗ್ರಾಮ, ಕುಂದಾಪುರ ತಾಲೂಕು. 3) ಹರೀಶ ಶೆಟ್ಟಿ ಪ್ರಾಯ 36 ವರ್ಷ, ನಂಚಾರು ಗ್ರಾಮ, ಬ್ರಹ್ಮಾವರ ತಾಲೂಕು, 4) ಚಿರಾಗ್ ಶೆಟ್ಟಿ, ಪ್ರಾಯ 34 ವರ್ಷ, ಬೆಳ್ವೆ ಗ್ರಾಮ, ಹೆಬ್ರಿ ತಾಲೂಕು, 5) ಕಿರಣ ಶೆಟ್ಟಿ, ಪ್ರಾಯ 39 ವರ್ಷ, ಬೆಳ್ವೆ ಗ್ರಾಮ, ಹೆಬ್ರಿ ತಾಲೂಕು ಎಂಬುದಾಗಿ ತಿಳಿಸಿದ್ದು ಪ್ರಕಾಶ್‌ ಪೂಜಾರಿ ಸುರ್ಗೋಳಿ ಎಂಬಾತನು ತಪ್ಪಿಸಿಕೊಂಡು ಓಡಿ ಹೋಗಿದ್ದು ಅವರುಗಳು ಅಕ್ರಮವಾಗಿ ಹಣವನ್ನು ಗಳಿಸುವ ಉದ್ದೇಶದಿಂದ ಹಣವನ್ನು ಪಣವಾಗಿ ಕಟ್ಟಿ ಅಂದರ್‌ ಬಾಹರ್‌ ಇಸ್ಪಿಟು ಆಟವನ್ನು ಆಡುತ್ತಿದ್ದುದಾಗಿ ತಪ್ಪನ್ನು ಒಪ್ಪಿಕೊಂಡಿದ್ದು ಅವರು ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ್ದ 11,160/- ರೂ ನಗದು ಹಾಗೂ 52‌ ಇಸ್ಪೀಟ್‌ ಎಲೆಗಳು, ಚಾಪೆ ಹಾಗೂ ಮೋಟಾರು ಸೈಕಲ್‌, ಕಾರನ್ನು ಮುಂದಿನ ಕ್ರಮದ ಬಗ್ಗೆ ಪೊಲೀಸರು ಸ್ವಾದೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ  ಕಲಂ: 87 ಕೆ.ಪಿ ಕಾಯ್ದೆ ರಂತೆ ಪ್ರಕರಣ ದಾಖಲಾಗಿದೆ.

error: No Copying!