images-9.jpeg
Spread the love

ಮಣಿಪಾಲ: ದಿನಾಂಕ:30-03-2026 (ಹಾಯ್ ಉಡುಪಿ ನ್ಯೂಸ್) ಕಾಪು ತಾಲೂಕು ತಲ್ವಾರ್ ತೋಟದ ಝಿಝಾನ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಅಧ್ಯಕ್ಷ ರೋರ್ವರು ಪೋರ್ಜರಿ ಜಿಪಿಎ ಸ್ರಷ್ಟಿಸಿ ಮೋಸ ಮಾಡಿದ್ದಾರೆ ಎಂದು ಮಹಮ್ಮದ್ ಅಶ್ರಫ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಣಿಪಾಲದ ಬ್ಲೂಬೆರಿ ವುಡ್ಸ್ ನ ನಿವಾಸಿ ಮಹಮ್ಮದ್ ಅಶ್ರಫ್ (53)  ಇವರಿಗೂ 1ನೇ ಆಪಾದಿತ ಗುಲಾಮ್ ಮಹಮ್ಮದ್ (57) 7-7 ಬಿಹೆಚ್ ಹೆಜಮಾಡಿ, ಝಿಂಝಾನ್ ಮಂಜಿಲ್, ತಲ್ವಾರ್ ತೋಟ, ಕಾಪು ಇವರಿಗೂ ಹಲವಾರು ವರ್ಷಗಳಿಂದ ಪರಿಚಯವಿದ್ದು, ಗುಲಾಮ್ ಮಹಮ್ಮದ್ ನು ಝಿಝಾನ್ ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಅಧ್ಯಕ್ಷ ನೆಂದು ಪ್ರತಿನಿಧಿಸುತ್ತಿದ್ದನು.

1ನೇಆಪಾದಿತ ಗುಲಾಮ್ ಮೊಹಮ್ಮದ್ ನು ಮಹಮ್ಮದ್ ಅಶ್ರಫ್ ರ ಮತ್ತು ಅವರ ತಮ್ಮ ರಜಬ್ ಬ್ಯಾರಿಯ ಮೇಲೆ ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶರ ಕೋರ್ಟಿನಲ್ಲಿ OS119/2025 ಮತ್ತು 120/2025 ಎಂಬ 2 ಸಿವಿಲ್ ದಾವೆಗಳನ್ನು ದಾಖಲಿಸಿದ್ದು, ಅವುಗಳ ನೋಟೀಸ್ ಬಂದಿದ್ದು, ಅದರಲ್ಲಿ 1ನೇ ಆರೋಪಿ ಗುಲಾಮ್ ಮೊಹಮ್ಮದ್ ನು ಈ ವ್ಯಾಜ್ಯಗಳಲ್ಲಿ ಮಹಮ್ಮದ್ ಅಶ್ರಫ್  ಹಾಗೂ ಅವರ ತಮ್ಮ ರಜಬ್ ಬ್ಯಾರಿ ಯು ಕಾಪು ತಾಲೂಕಿನ ಪಾದೇಬೆಟ್ಟು ಗ್ರಾಮದ ಸರ್ವೇ ನಂ.50/16 ಮತ್ತು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಸರ್ವೇನಂ.62/14P7 ಸ್ಥಿರಾಸ್ತಿಗಳ ಪಾಲುದಾರರಾಗಿರುವುದಾಗಿ, ಹಾಗೂ ಈ ಸ್ಥಿರಾಸ್ತಿಗಳನ್ನು ಅಭಿವೃದ್ದಿ ಪಡಿಸಲು 1ನೇ ಆರೋಪಿ ಗುಲಾಮ್ ಮೊಹಮ್ಮದ್ ನಿಗೆ ಅಧಿಕಾರ ಕೊಡಲು ದಿನಾಂಕ 28/11/20 ರಂದು ಉಡುಪಿಯ ನೋಟರಿ ನಾರಾಯಣ ಚೌಟ ಎಂಬವರ ಮುಂದೆ GPA ಯೊಂದನ್ನು ಬರೆದುಕೊಟ್ಟಿರುವುದಾಗಿ ಹಾಗೂ ಸದ್ರಿ ಆಸ್ತಿಯನ್ನು ಅಭಿವೃದ್ದಿ ಪಡಿಸಿ ಕಟ್ಟಡವನ್ನು ಕಟ್ಟಿಸಿ, ಅವುಗಳ ಖರ್ಚು ಸುಮಾರು 1,28,00,000/- ರೂ ಹಣವನ್ನು ಬಾಕಿ ಇರಿಸಿಕೊಂಡಿದ್ದಾಗಿ ಸುಳ್ಳು ದಾವೆಯನ್ನು ದಾಖಲಿಸಿರುವುದಾಗಿದೆ.

1ನೇ ಆರೋಪಿ ಗುಲಾಮ್ ಮೊಹಮ್ಮದ್ ನು ದಾವೆಯಲ್ಲಿ ನಮೂದಿಸಿದ ಕಾಪು ತಾಲೂಕಿನ ಪಾದೇಬೆಟ್ಟು ಗ್ರಾಮದ ಸರ್ವೇ ನಂ.50/16 ನ ಸ್ಥಿರಾಸ್ತಿಯು ಮಹಮ್ಮದ್ ಅಶ್ರಫ್ ರ ಹೆಂಡತಿ ನಸೀಮ ಹಾಗೂ ಮಹಮ್ಮದ್ ಅಶ್ರಫ್ ರ ತಮ್ಮನ ಹೆಂಡತಿ ಅಸ್ಮತ್ ರವರಿಗೆ ಸೇರಿದ್ದು, ಮತ್ತು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಸರ್ವೇನಂ.62/14P7 ಸ್ಥಿರಾಸ್ತಿಯನ್ನು ಮಹಮ್ಮದ್ ಅಶ್ರಫ್ ರವರು 8/1/2024 ರಲ್ಲಿ ರಿಜಿಸ್ಟ್ರಿ ದಾಖಲೆಯ ಮೂಲಕ ಖರೀದಿ ಮಾಡಿರುವುದಾಗಿದೆ.

1ನೇ ಆರೋಪಿ ಗುಲಾಮ್ ಮೊಹಮ್ಮದ್ ನು ದಾವೆಯಲ್ಲಿ ಹಾಜರು ಪಡಿಸಿದ ಜಿಪಿಎ ಯು ಒಂದು ಸುಳ್ಳು ಹಾಗೂ ಪೋರ್ಜರಿ ದಾಖಲೆಯಾಗಿದ್ದು, ಮಹಮ್ಮದ್ ಅಶ್ರಫ್ ರವರಾಗಲೀ ಅವರ  ತಮ್ಮನಾಗಲೀ ಜಿಪಿಎಗೆ ಸಹಿ ಮಾಡಿರುವುದಿಲ್ಲ. ಇದೊಂದು ಸುಳ್ಳು ಹಾಗೂ ಪೋರ್ಜರಿ ಎಂದು ಗೊತ್ತಿದ್ದರೂ 2ನೇ ಆರೋಪಿ ಮೊಹಮದ್ ಆಸೀಪ್ (30) ಫಾತಿಮಾ ಮಂಜಿಲ್, ಎಸ್ ಎಸ್ ರಸ್ತೆ, ಹೆಜಮಾಡಿ, ಕಾಪು ಎಂಬವರು ಸಾಕ್ಷಿಯಾಗಿ ಸಹಿ ಹಾಕಿದ್ದಾರೆ.

ಆರೋಪಿಗಳು ಮಹಮ್ಮದ್ ಅಶ್ರಫ್ ರಿಗೆ ಹಾಗೂ ಅವರ ತಮ್ಮನಿಗೆ ಮೋಸ ಹಾಗೂ ನಷ್ಟವನ್ನುಂಟು ಮಾಡುವ ದುರುದ್ದೇಶದಿಂದ ಸುಳ್ಳು ಹಾಗೂ ಕೃತಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಮ್ಮದ್ ಅಶ್ರಫ್ ರವರು ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ  ಕಲಂ: 465, 468, 467, 471, 120B, r/w 35 ರಂತೆ ಪ್ರಕರಣ ದಾಖಲಾಗಿದೆ.

error: No Copying!