ಉಡುಪಿ: ದಿನಾಂಕ : 30/03/2026(ಹಾಯ್ ಉಡುಪಿ ನ್ಯೂಸ್) ಅಡ್ಕದ ಕಟ್ಟೆಯ ಕೋಲ ನೋಡಿ ಹಿಂತಿರುಗಿ ಮನೆಗೆ ಬರುತ್ತಿದ್ದ ಯುವಕನೋರ್ವನಿಗೆ ಕಾರಿನಲ್ಲಿ ಬಂದ ಯುವಕರ ಗುಂಪೊಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.
ಉಡುಪಿಯ ನಿಟ್ಟೂರಿನ ಅಡ್ಕದ ಕಟ್ಟೆ ಬಳಿಯ ದೈವ ಸ್ಥಾನದ ಕೋಲವು ದಿನಾಂಕ : 28-03-2026 ರಂದು ಇದ್ದು ,ಈಶಾನ್ ಶೆಟ್ಟಿ(19) ವಾಸ: ಇನ್ ಚೆಕ್ ಸಿಟಿ ಬಿಲ್ಡಿಂಗ್ ಕೊರಂಗ್ರಪಾಡಿ ಗ್ರಾಮ ಎಂಬವರು ತನ್ನ KA20HG3481 ನೇ ಮೋಟಾರು ಸೈಕಲ್ ನಲ್ಲಿ ರಾತ್ರಿ 11:00 ಗಂಟೆಗೆ ಹೋಗಿ ನಂತರ ದಿನಾಂಕ 29/03/2026 ರಂದು ಕೋಲ ನೋಡಿಕೊಂಡು ಮನೆಗೆ ಹಿಂದಿರುವಾಗ ರಾತ್ರಿ ಸುಮಾರು 1:30 ಗಂಟೆಗೆ ದೈವಸ್ಥಾನದಿಂದ ಸ್ವಲ್ಪ ಮುಂದೆ ಬಂದಾಗ ಗ್ರೆ ಬಣ್ಣದ ಬೊಲೆರೋ ಕಾರಿನಲ್ಲಿ 5 ಜನ ಯುವಕರು ಬಂದು ಕಾರು ನಿಲ್ಲಿಸಿ ಕಾರಿನ ಒಳಗಿಂದ ಈಶಾನ್ ಶೆಟ್ಟಿ ಯವರ ಪರಿಚಯದ ಚರಣ್ ಎಂಬಾತನು ಇಳಿದು ಬಂದು ಈಶಾನ್ ಶೆಟ್ಟಿ ಯವರ ಮೋಟಾರು ಸೈಕಲ್ ನ್ನು ಅಡ್ಡಗಟ್ಟಿ ಏರುದ್ವನಿಯಲ್ಲಿ ನಿನ್ನ ಹತ್ತಿರ ಮಾತಾನಾಡಲಿಕ್ಕೆ ಇದೆ ಗೌಂಡ್ ಹತ್ತಿರ ಹೋಗುವ ಎಂದು ಹೇಳಿ ಈಶಾನ್ ಶೆಟ್ಟಿ ಯವರ ಬೈಕ್ ನಲ್ಲಿಯೆ ಆರೋಪಿ ಚರಣ್ ಹಿಂದೆ ಕುಳಿತುಕೊಂಡು ಗ್ರೌಂಡ್ ಗೆ ಹೋಗಿದ್ದು , ಅಲ್ಲಿ ಚರಣನು ನಿನ್ನ ತಮ್ಮ ನನಗೆ ಹಣ ಕೊಡಲಿಕ್ಕಿದೆ ಅದನ್ನು ನೀನು ಕೊಡಬೇಕು ಎಂದು ಬೆದರಿಸಿ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿದ್ದು , ಚರಣ್ ನೊಂದಿಗೆ ಬಂದ ಇತರ 4 ಜನ ಆರೋಪಿಗಳು ಏಕಾಏಕಿ ಈಶಾನ್ ಶೆಟ್ಟಿ ಯವರ ಹತ್ತಿರ ಬಂದು ಚರಣ್ ನೊಂದಿಗೆ ಸೇರಿ ಈಶಾನ್ ಶೆಟ್ಟಿ ಯವರ ಮುಖಕ್ಕೆ , ತಲೆಗೆ , ಎದೆಗೆ , ಬೆನ್ನಿಗೆ ಕೈಯಿಂದ ಗುದ್ದಿರುತ್ತಾರೆ ಮತ್ತು ಅದರಲ್ಲಿ ಒಬ್ಬನು ಡ್ರ್ಯಾಗರ್ ನ ಹ್ಯಾಂಡಲ್ ನಿಂದ ತುಟಿಗೆ ಮುಖಕ್ಕೆ ತಲೆಗೆ ಹೊಡೆದಿರುತ್ತಾನೆ.
ಈಶಾನ್ ಶೆಟ್ಟಿ ಯವರ ಮೊಬೈಲ್ , ಮೋಟಾರು ಸೈಕಲ್ , ಹೆಲ್ ಮೇಟ್ ನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ . ಆಗ ಸಮಯ ಸುಮಾರು ಬೆಳಿಗ್ಗೆ 2:00 ಗಂಟೆ ಆಗಿರುತ್ತದೆ. ಡ್ರ್ಯಾಗರ್ ನಿಂದ ಹಲ್ಲೆ ಮಾಡಿದಾತನ ಹೆಸರು ಚಿತ್ತರಂಜನ್ ಎಂದು ತಿಳಿದಿರುತ್ತದೆ ,ಹಾಗೂ ಇತರರ ಹೆಸರು ಧ್ಯಾನ್ , ಪ್ರಭು, ಯೋಗೀಶ ಎಂಬುದಾಗಿರುತ್ತದೆ.
ಈಶಾನ್ ಶೆಟ್ಟಿ ಯವರ ಮೊಬೈಲ್ , ಮೋಟಾರು ಸೈಕಲ್ , ಹೆಲ್ ಮೇಟ್ ನ್ನು ಹಿಡಿದುಕೊಂಡು, ನೀನು ಹಣವನ್ನು ಕೊಟ್ಟು ಇದನ್ನು ತೆಗೆದುಕೊಂಡು ಹೋಗು ಎಂದು ಹೇಳಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈಶಾನ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ 189(2) ,191(2), 115(2) , 118(1) , 308(5) , 352, 351(2) RW 19 ರಂತೆ ಪ್ರಕರಣ ದಾಖಲಾಗಿದೆ.
