ಕಾರ್ಕಳ: ದಿನಾಂಕ:19-03-2026(ಹಾಯ್ ಉಡುಪಿ ನ್ಯೂಸ್) ಮುಂಡ್ಕೂರು ಗ್ರಾಮದ ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ತೆರಳುತ್ತಿದ್ದ ವ್ಯಕ್ತಿ ಯೋರ್ವರಿಗೆ ಪ್ರಸಾದ್ ಶೆಟ್ಟಿ ಎಂಬವರು ಜೀವಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ಮುಂಡ್ಕೂರು ಗ್ರಾಮದ ನಿವಾಸಿ ಸೋಮನಾಥ ಪೂಜಾರಿ ಎಂಬವರು ದಿನಾಂಕ 17/03/2026 ರಂದು ಮುಂಡ್ಕೂರು ಗ್ರಾಮದ ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತಿರುವಾಗ ರಾತ್ರಿ 11:00 ಗಂಟೆಗೆ ದೇವಸ್ಥಾನದ ಒಳಗೆ ಹೋಗುತ್ತಿದ್ದ ಸೋಮನಾಥ ಪೂಜಾರಿ ರವರನ್ನು ಆರೋಪಿತ ಪ್ರಸಾದ್ ಶೆಟ್ಟಿ ಎಂಬವನು ಮುಂದಕ್ಕೆ ಹೋಗದಂತೆ ತಡೆದು ಹಿಂದಕ್ಕೆ ತಳ್ಳಿ ಏರು ಧ್ವನಿಯಲ್ಲಿ ಮಾತನಾಡುತ್ತಾ ಹಿಂದಕ್ಕೆ ತಳ್ಳಿದ್ದು ಆಗ ಸೋಮನಾಥ ಪೂಜಾರಿ ಅವರು ಆರೋಪಿ ಪ್ರಸಾದ್ ಶೆಟ್ಟಿಗೆ ಊರಿನ ಜಾತ್ರಾ ಮಹೋತ್ಸವ ಸಂಧರ್ಭದಲ್ಲಿ ಗಲಾಡೆ ಮಾಡಬೇಡ ಎಂದು ಹೇಳಿದರೂ ಮತ್ತೆ ಸೋಮನಾಥ ಪೂಜಾರಿ ಯವರ ಎದೆಗೆ ಕೈ ಹಾಕಿ ದೂಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸೋಮನಾಥ ಪೂಜಾರಿ ತಿಳಿಸಿದ್ದಾರೆ.
ಸೋಮನಾಥ ಪೂಜಾರಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 126(2), 352, 351, 115(2) BNS ರಂತೆ ಪ್ರಕರಣ ದಾಖಲಾಗಿದೆ.
