ಉಡುಪಿ: ದಿನಾಂಕ: 19-03-2026 (ಹಾಯ್ ಉಡುಪಿ ನ್ಯೂಸ್) ಬಸ್ ನಿಲ್ದಾಣದಲ್ಲಿ ತನ್ನ ಮಗುವಿನೊಂದಿಗೆ ತಂಗಿದ್ದ ತಾಯಿ ಮತ್ತು ಮಗುವಿಗೆ ಉಡುಪಿ ಪೊಲೀಸರು ಆಶ್ರಯ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉಡುಪಿ ಬಸ್ ನಿಲ್ದಾಣದಲ್ಲಿ ಒಬ್ಬ ಮಹಿಳೆ ಕಳೆದ 3 ದಿನಗಳಿಂದ ತನ್ನ ಮಗುವಿನೊಂದಿಗೆ ತಂಗಿರುವುದಾಗಿ ಸಾರ್ವಜನಿಕ ರಿಂದ 112 ಕ್ಕೆ ಕರೆ ಬಂದಿದ್ದು, ಪೊಲೀಸರು ಅಕ್ಕ ಪಡೆಯವರೊಂದಿಗೆ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ, ಆ ಮಹಿಳೆಗೆ ಹಾಗೂ ಅವರ ಮಗುವಿಗೆ ನೋಡಿಕೊಳ್ಳುವವರು ಯಾರೂ ಇಲ್ಲದ ಸ್ಥಿತಿ ಇದ್ದು ಸುಮಾರು 5 ವರ್ಷದ ಮಗುವನ್ನು ಚೈಲ್ಡ್ ಕೇರ್ ಸೆಂಟರ್‌ಗೆ ಸೇರಿಸುವಂತೆ ತಾಯಿ ಮನವಿ ಮಾಡಿಕೊಂಡಿರುತ್ತಾರೆ.
ತಾಯಿಯ ಮನವಿಯ ಮೇರೆಗೆ, ಮಗುವನ್ನು ಜಿಲ್ಲಾ ಚೈಲ್ಡ್ ವೆಲ್ಫೇರ್ ವಿಭಾಗ (ಮಣಿಪಾಲ ಜಿಲ್ಲಾಧಿಕಾರಿ ಕಚೇರಿ) ರವರಿಗೆ ಹಸ್ತಾಂತರಿಸಿ, ಅಕ್ಕ ಪಡೆಯವರು ತಾಯಿಯ ಹಿಂದಿನ ಉದ್ಯೋಗದಾತರೊಂದಿಗೆ ಮಾತನಾಡಿ, ಅವರಿಗೆ ಪುನಃ ಉದ್ಯೋಗ ದೊರಕುವುದನ್ನು ಖಚಿತಪಡಿಸಿಕೊಂಡು ತಾಯಿಯನ್ನು ಉದ್ಯೋಗ ಮುಂದುವರಿಸಲು ಪೊಲೀಸ್ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ.
