images-18.jpeg
Spread the love

ಕುಂದಾಪುರ: ದಿನಾಂಕ: 20-03-2026(ಹಾಯ್ ಉಡುಪಿ ನ್ಯೂಸ್) ಅನಧಿಕೃತವಾಗಿ ಪ್ರೈವೇಟ್ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದ ವ್ಯಕ್ತಿ ಯೋರ್ವರ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಡೇರ ಹೋಬಳಿ ಗ್ರಾಮದ ನಾಯ್ಕರ ಬೆಟ್ಟು ನಿವಾಸಿ ಅಣ್ಣಪ್ಪಯ್ಯ ಯು.ಎಲ್  ಎಂಬವನು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ  ಅನಧಿಕೃತವಾಗಿ ಮಾರಿಕಾಂಬ ಸೆಕ್ಯೂರಿಟಿ ಏಜೆನ್ಸಿ ಎಂಬ ಪ್ರೈವೇಟ್‌ ಸೆಕ್ಯೂರಿಟಿ ಏಜೆನ್ಸಿ ಹೆಸರಿನಲ್ಲಿ ಉಡುಪಿ , ಉತ್ತರಕನ್ನಡ , ಹಾವೇರಿ ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿರುತ್ತಾನೆ, ಇವರು ಈ ಹಿಂದೆ PSA 05/2011 ರಂತೆ ಪರವಾನಿಗೆಯನ್ನು ಪಡೆದು ಕುಂದೇಶ್ವರ ಸೆಕ್ಯೂರಿಟಿ ಏಜೆನ್ಸಿ ಎಂಬ ಭದ್ರತಾ ಏಜೆನ್ಸಿ ನಡೆಸುತ್ತಿದ್ದು ದಿನಾಂಕ 18/01/2016 ರಂದು ಪರವಾನಿಗೆ ಅವಧಿ ಮುಕ್ತಾಯಗೊಂಡಿರುತ್ತದೆ. ಈ ಬಗ್ಗೆ ಮಾಹಿತಿ ಕಲೆ ಹಾಕುವಾಗ ಆಪಾದಿತ ಅಣ್ಣಪ್ಪಯ್ಯ ಪರವಾನಿಗೆ ಮುಗಿದರೂ ಸಹ ಮಾರಿಕಾಂಬಾ ಸೆಕ್ಯೂರಿಟಿ ಏಜೆನ್ಸಿ ಎಂಬ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯನ್ನು ಯಾವುದೇ ಪರವಾನಿಗೆಯನ್ನು ಪಡೆಯದೇ ಯಾವುದೇ ನಿಯಮವನ್ನು ಪಾಲಿಸದೇ ಸೆಕ್ಯೂರಿಟಿಗಳನ್ನು ನೇಮಿಸಿ ಅಪರಾಧ ಎಸಗಿದ್ದಾನೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ:4, 20 The Private Security Agencies Regulation Act 2005 ರಂತೆ ಪ್ರಕರಣ ದಾಖಲಾಗಿದೆ.

error: No Copying!