Spread the love

ಒರಿಸ್ಸಾ: ಮೇ೧೦(ಹಾಯ್ ಉಡುಪಿ ನ್ಯೂಸ್) ಭುವನೇಶ್ವರದ ಹತ್ತಿರ ಅಮ್ರಪಲ್ಲಿ ರೆಸಾರ್ಟ್ ನಲ್ಲಿ ಒರಿಸ್ಸಾದ ಘನತೆವೆತ್ತ ರಾಜ್ಯಪಾಲ ಪ್ರೊಫೆಸರ್ ಗಣೇಶಿ ಲಾಲ್ ಅವರು 2 ದಿನಗಳ ಇಂಡಿಯನ್ ಜರ್ನಲಿಸ್ಟ ಯೂನಿಯನ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು .ರಾಷ್ಟ್ರೀಯ ಅಧ್ಯಕ್ಷ ಕೆ ಬಿ ಪಂಡಿತ್ , ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಮುರುಗೇಶ್ ಶಿವಪೂಜಿ ,ಒರಿಸ್ಸಾ ಪರ್ತಕರ್ತರ ಸಂಘದ ರಾಜ್ಯ ಅಧ್ಯಕ್ಷ ಸುಜ್ಞಾನ ಚೌಧರಿ ಹಿರಿಯ ಪತ್ರಕರ್ತ ಗೌರಿ ಶಂಕರ ಆಚಾರ್ಯ ಉಪಸ್ಥಿತರಿದ್ದರು .

error: No Copying!