IMG-20240220-WA0038.jpg
Spread the love

ಹೆಬ್ರಿ: ದಿನಾಂಕ:17-03-2026(ಹಾಯ್ ಉಡುಪಿ ನ್ಯೂಸ್) ಪಾದೆಮಠ ಪರಿಸರದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸ್ ರೈಡ್ ಮಾಡಿಸಿದ್ದಾನೆ ಎಂದು ಆರೋಪಿಸಿ ಕೆಂಜೂರು ಜಯಕರ ಶೆಟ್ಟಿ ಎಂಬವನು ಹಲ್ಲೆ ನಡೆಸಿರುವ ಬಗ್ಗೆ ವ್ಯಕ್ತಿ ಯೋರ್ವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬ್ರಹ್ಮಾವರ ನಾಲ್ಕೂರು ಗ್ರಾಮದ ನಿವಾಸಿ ವಿಠಲ ಪರವ, ಎಂಬವರು ದಿನಾಂಕ 16/03/2026 ರಂದು ಬೆಳಿಗ್ಗೆ ಮುದ್ದೂರಿಗೆಂದು ಹೋಗುವಾಗ ಕೆಂಜೂರು ಜಯಕರ ಶೆಟ್ಟಿ ಎಂಬವನು ಪಾದೆ ಮಠದಲ್ಲಿ ಕೋಳಿ ಅಂಕ ನಡೆಯುತ್ತಿದ್ದಾಗ ವಿಠಲ ಪರವ ಅವರು ಪೊಲೀಸರಿಗೆ ಮಾಹಿತಿ ನೀಡಿ  ರೈಡ್‌ ಮಾಡಿಸಿದ್ದಾರೆ ಎಂದು ಹೇಳಿ ಆರೋಪಿಸಿ ಅವಾಚ್ಯವಾಗಿ ಬೈದು ವಿಠಲ ಪರವರಿಗೆ ಕಾಲಿನಲ್ಲಿ ತುಳಿದು ಕುತ್ತಿಗೆ ಒತ್ತಿ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿಠಲ ಪರವ ಅವರು ತಿಳಿಸಿದ್ದಾರೆ.

ವಿಠಲ ಪರವ ಅವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 11/2026 US 115(2)351(2) BNS 3(1) (r) (s), 3(2) (v-a) SC ST ACT ರಂತೆ ಪ್ರಕರಣ ದಾಖಲಾಗಿದೆ.

error: No Copying!