ಉಡುಪಿ: ದಿನಾಂಕ:17-03-2026 (ಹಾಯ್ ಉಡುಪಿ ನ್ಯೂಸ್) ಯಾರೋ ಅಪರಿಚಿತರು ಮಹಾನಗರ ಗ್ಯಾಸ್ ಲಿಮಿಟೆಡ್ ಮುಂಬೈ ನಿಂದ ಕರೆ ಮಾಡುವುದೆಂದು ನಂಬಿಸಿ ಮಹಿಳೆಯೋರ್ವರಿಗೆ 1.45 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಮೂಲದ ಲೀಲಿ ಪ್ಲೋರಿನ್ ಡಿಸಿಲ್ವಾ ಎಂಬವರು ದಿನಾಂಕ 11/03/2026 ರಂದು ಮನೆಯಲ್ಲಿರುವಾಗ ಬೆಳಿಗ್ಗೆ ಮಹಾನಗರ ಗ್ಯಾಸ್ ಲಿಮಿಡೆಟ್ ಮುಂಬೈ ನಿಂದ ದೇವೇಶ ಜೋಷಿ ಎಂಬುವವರು ಕರೆ ಮಾಡಿ ಗ್ಯಾಸ್ ಗೆ online ನಲ್ಲಿ ಹಣ ಪಾವತಿಸಿರುವ ಬಗ್ಗೆ ಅಬ್ಡೆಟ್ ಆಗಿಲ್ಲ ಎಂದು ವಾಟ್ಸಾಪ್ ನಲ್ಲಿ ಮಹಾನಗರ ಗ್ಯಾಸ್ APK APP ಕಳುಹಿಸಿದ್ದು ಅದನ್ನು download ಮಾಡುವಂತೆ ತಿಳಿಸಿದ್ದು ಲೀಲಿ ಫ್ಲೋರಿನ್ ಡಿಸಿಲ್ವಾ ರವರು ಡೌನ್ ಲೋಡ್ ಮಾಡಿರುತ್ತಾರೆ.
ತಾಂತ್ರಿಕ ದೋಷ ಉಂಟಾಗಿದೆ ಎಂದು ಪುನ: ಮಧ್ಯಾಹ್ನ ಕರೆ ಮಾಡಿ ಲೀಲಿ ಫ್ಲೋರಿನ್ ಡಿಸಿಲ್ವಾ ರವರ ಗಂಡನ ಕೆನರಾ ಬ್ಯಾಂಕ್ ಸಂತೆಕಟ್ಟೆ ಬ್ರ್ಯಾಂಚ್ ಖಾತೆ ಸಂಖ್ಯೆ ಪಡೆದುಕೊಂಡಿರುತ್ತಾರೆ . ಸಂಜೆ ಸಮಯಕ್ಕೆ ಮೊಬೈಲ್ ಗೆ ಮೇಸೆಜ್ ಬಂದಿದ್ದು ನೋಡಿದಾಗ ಲೀಲಿ ಫ್ಲೋರಿನ್ ಡಿಸಿಲ್ವಾ ರವರ ICICI ಬ್ಯಾಂಕ್ ಮುಂಬೈ ಬ್ರಾಂಚ್ ಖಾತೆಯಿಂದ 46,636/- ರೂಪಾಯಿ ಮತ್ತು 29,381/- ರೂಪಾಯಿ ಕಡಿತಗೊಂಡಿರುತ್ತದೆ ಮತ್ತು ಲೀಲಿ ಫ್ಲೋರಿನ್ ಡಿಸಿಲ್ವಾ ರವರ ಗಂಡನ ಕೆನರಾ ಬ್ಯಾಂಕ್ ಸಂತೆಕಟ್ಟೆ ಬ್ರ್ಯಾಂಚ್ ಖಾತೆಯಿಂದ 69,005.31/- ರೂಪಾಯಿ ಕಡಿತಗೊಂಡಿರುತ್ತದೆ.
ಲೀಲಿ ಫ್ಲೋರಿನ್ ಡಿಸಿಲ್ವಾ ರವರಿಗೆ ಕರೆ ಮಾಡಿ ಮಹಾನಗರ ಗ್ಯಾಸ್ ಲಿಮಿಡೆಟ್ ನಿಂದ ಕರೆ ಮಾಡಿದ್ದೆಂದು ನಂಬಿಸಿ ಗ್ಯಾಸ್ ಗೆ online ನಲ್ಲಿ ಹಣ ಪಾವತಿಸಿರುವ ಬಗ್ಗೆ ಅಬ್ಡೆಟ್ ಆಗಿಲ್ಲ ಎಂದು APK APP download ಮಾಡಿಸಿಕೊಂಡು ಲೀಲಿ ಫ್ಲೋರಿನ್ ಡಿಸಿಲ್ವಾ ರವರ ಮತ್ತು ಅವರ ಗಂಡನ ICIC ಬ್ಯಾಂಕ್ ಖಾತೆ ಮತ್ತು ಕೆನರಾ ಬ್ಯಾಂಕ್ ಖಾತೆಯಿಂದ 1,45,022/- ರೂಪಾಯಿ ಕಡಿತಗೊಳಿಸಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಲೀಲಿ ಫ್ಲೋರಿನ್ ಡಿಸಿಲ್ವಾ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(4) BNS & 66(D) IT act ರಂತೆ ಪ್ರಕರಣ ದಾಖಲಾಗಿದೆ.
