images-20.jpeg
Spread the love

ಕೊಲ್ಲೂರು: ದಿನಾಂಕ:12-03-2026(ಹಾಯ್ ಉಡುಪಿ ನ್ಯೂಸ್) ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರರೋರ್ವರಿಗೆ ಆರೋಪಿ ವಿನೋದ್ ಹೆಬ್ಬಾರ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ, ಚಿತ್ತೂರು ಗ್ರಾಮದ ನಿವಾಸಿ ಸಂಜೀವ ಶೆಟ್ಟಿ (62) ಎಂಬವರು ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರರಾಗಿದ್ದು, ದಿನಾಂಕ 11/03/2026 ರಂದು ಸಂಜೆ ಮಾರನೇ ದಿನ ನಡೆಯಲಿರುವ ಶ್ರೀ ದೇವಳದ ವಾರ್ಷಿಕಾ ಜಾತ್ರಾ ಮಹೋತ್ಸವದ ಸಲುವಾಗಿ ದೇವಸ್ಥಾನದ ಗರ್ಭಗುಡಿಯ ಪ್ರಾಂಗಣದಲ್ಲಿ ಹೂವಿನ ಅಲಂಕಾರ ಮಾಡಿಸುವ ಕರ್ತವ್ಯದಲ್ಲಿ ನಿರತರಾದ ಸಮಯದಲ್ಲಿ ಆರೋಪಿ ವಿನೋಧ್ ಹೆಬ್ಬಾರ್ ಎಂಬವರು ಅವಾಚ್ಯ ಶಬ್ದಗಳಿಂದ ಸಂಜೀವ ಶೆಟ್ಟಿ ಯವರಿಗೆ  ಬೈದಿದ್ದಾರೆ .

ಸಂಜೀವ ಶೆಟ್ಟಿ ಯವರು ದೇವಸ್ಥಾನದ ಅಧ್ಯಕ್ಷರಲ್ಲಿ ದೂರು ನೀಡುತ್ತೇನೆ ಎಂದು ಹೇಳಿ ಹೋದಾಗ ಆರೋಪಿ ವಿನೋದ್ ಹೆಬ್ಬಾರ್ ನು ಸಂಜೀವ ಶೆಟ್ಟಿ ಯವರನ್ನು ಹಿಂಬಾಲಿಸಿಕೊಂಡು ಅಧ್ಯಕ್ಷರ ಕೋಣೆಯೊಳಗೆ ಬಂದು ಅಲ್ಲಿ ಅಡ್ಡಗಟ್ಟಿ ತಾನೇ ನಿಮ್ಮ ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಅಧ್ಯಕ್ಷರಾದ ಬಾಬು ಹೆಗ್ಡೆಯವರ ಜೊತೆ ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಘುರಾಮ ದೇವಾಡಿಗ ರವರ ಜೊತೆ ಜಗಳವಾಡಿ ಅವರಿಗೂ ಏಕ ವಚನದಲ್ಲಿ ನಿಂದಿಸಿ ಮಾತನಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂಜೀವ ಶೆಟ್ಟಿ ಯವರು ತಿಳಿಸಿದ್ದಾರೆ.

ಸಂಜೀವ ಶೆಟ್ಟಿ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 352, 126 (2), 132 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!