gettyimages-1133692452-612x612-1.jpg
Spread the love

ಬ್ರಹ್ಮಾವರ: ದಿನಾಂಕ: 12/03/2026 (ಹಾಯ್ ಉಡುಪಿ ನ್ಯೂಸ್) ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಯೋರ್ವನನ್ನು ಬಂಧಿಸುವ ಸಮಯ ಆತ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯ ಉಪ್ಪೂರು ಲಕ್ಷ್ಮೀ ನಗರ ಎಂಬಲ್ಲಿ ನಡೆದಿದೆ.

ಮಲ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುರೇಶ್ ಕುಮಾರ್ ಅವರು ಮಲ್ಪೆ ವೃತ್ತ ನಿರೀಕ್ಷಕರವರ ಆದೇಶದಂತೆ ಬಾಕಿ ಇರುವ ವಾರೆಂಟ್ ಜ್ಯಾರಿ ಬಗ್ಗೆ ಮಲ್ಪೆ ಠಾಣಾ ಅಕ್ರ 98/2025 ಕಲಂ 8A(C), 20(b)(ii)A, 22 (b) NDPS ACT ಪ್ರಕರಣದಲ್ಲಿ ವಾರಂಟ್ ಕರ್ತವ್ಯಕ್ಕೆ ದಿನಾಂಕ :11-03-2026 ರಂದು ಠಾಣೆಯ ಹೆಡ್‌ ಕಾನ್ಸ್ಟೇಬಲ್‌ ಆದರ್ಶ ರವರೊಂದಿಗೆ ಬೆಳಿಗ್ಗೆ ವಾರೆಂಟ್ ಅಸಾಮಿಯಾದ ಕಿಶೋರ್ ಎಂಬವನ ಮನೆಯಾದ ಬ್ರಹ್ಮಾವರ ಠಾಣಾ ಸರದ್ದಿನ ಉಪ್ಪೂರು ಗ್ರಾಮದ ಲಕ್ಷ್ಮೀನಗರ ಎಂಬಲ್ಲಿರುವ ಮನೆಯ ಎದುರು ತಲುಪಿ ಮನೆಯ ಅಂಗಳದಲ್ಲಿ ನಿಂತು ಆಪಾದಿತ ಕಿಶೋರನನ್ನು ಕರೆದಿದ್ದು, ಆಗ ಆತನು ತಪ್ಪಿಸಿಕೊಳ್ಳಲು ಮನೆಯಿಂದ ಓಡಿದಾಗ ಹೆಡ್ ಕಾನ್ಸ್ಟೇಬಲ್ ಸುರೇಶ್ ಕುಮಾರ್ ರವರು ಹಾಗೂ ಅವರ ಜೊತೆಯಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಆದರ್ಶ ರವರು ಆತನನ್ನು ಹಿಡಿದುಕೊಂಡಿರುತ್ತಾರೆ.

ಆಗ ಆರೋಪಿ ಕಿಶೋರ್ ನು ಅವರಿಂದ ತಪ್ಪಿಸಿಕೊಳ್ಳಲು ಆತನ ಕೈಯಿಂದ ಸುರೇಶ್ ಕುಮಾರ್ ರ ಮುಖಕ್ಕೆ ಹಲ್ಲೆ ಮಾಡಿ, ಮುಂಗೈಯಿಂದ ಎಡಭಾಗದ ಪಕ್ಕೆಲುಬಿಗೆ ತಿವಿದನು ಹಾಗೂ ಆದರ್ಶ ರವರಿಗೂ ಸಹ ಆತನು ಕೈಯಿಂದ ಮುಖಕ್ಕೆ ಹಲ್ಲೆ ಮಾಡಿ, ಎಡಕೈಗೆ ಹೊಟ್ಟೆಯ ಬಲಭಾಗಕ್ಕೆ ಪರಚಿ, ಎಡಭುಜಕ್ಕೆ ಮುಷ್ಠಿಯಿಂದ ಗುದ್ದಿರುತ್ತಾನೆ.

ಅಲ್ಲದೇ ಆರೋಪಿ ಕಿಶೋರ್ ನು ಸುರೇಶ್ ಕುಮಾರ್ ರ ಬಳಿ ಇದ್ದ ಇಲಾಖೆಯ ವಾಕಿಟಾಕಿಯನ್ನು ಕಿತ್ತುಕೊಂಡು ನೆಲಕ್ಕೆ ಎಸೆದು ಅದನ್ನು ಜಖಂಗೊಳಿಸಿರುತ್ತಾನೆ. ಆಗ ಆರೋಪಿಯು ಆತನ ತಾಯಿಯನ್ನು ಕರೆದು ಮನೆಯಿಂದ ಕತ್ತಿಯನ್ನು ತೆಗೆದುಕೊಂಡು ಬಾ, ಪೊಲೀಸರನ್ನು ಇಲ್ಲಿಯೇ ಕಡಿದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ.ನಂತರ ಸುರೇಶ್ ಕುಮಾರ್ ಅವರು ಆರೋಪಿಯನ್ನು ವಾರೆಂಟ್ ನಲ್ಲಿ ಬಂಧಿಸಿ ವಶಕ್ಕೆ ಪಡೆದಿದ್ದು ಮಲ್ಪೆ ಠಾಣೆಗೆ ಕರೆದುಕೊಂಡು ಹೋಗಿರುತ್ತಾರೆ.

ಈ ಸಂದರ್ಭದಲ್ಲಿ ನಡೆದ ಹಲ್ಲೆಯಿಂದ ಗಾಯಗೊಂಡ ಹೆಡ್ ಕಾನ್ಸ್ಟೇಬಲ್ ಸುರೇಶ್ ಕುಮಾರ್ ಮತ್ತು ಹೆಡ್ ಕಾನ್ಸ್ಟೇಬಲ್ ಆದರ್ಶ ರವರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಮಾಡಿ, ಇಲಾಖಾ ಸ್ವತ್ತನ್ನು ಹಾನಿಗೊಳಿಸಿ, ಕತ್ತಿಯಿಂದ ಕಡಿದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವ ಆಪಾದಿತ ಕಿಶೋರ್ ನ ವಿರುದ್ಧ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 132, 121(1), 352, 351(2) BNS & US 2(a) Prevention of Destruction & Loss of Property Act 1981 ರಂತೆ ಪ್ರಕರಣ ದಾಖಲಾಗಿದೆ.

error: No Copying!