ಕಾರ್ಕಳ: ದಿನಾಂಕ:12-03-2026 (ಹಾಯ್ ಉಡುಪಿ ನ್ಯೂಸ್) ತಾಲೂಕು ಕಚೇರಿಯ ಸಹಾ ಅಭಿಲೇಖಾಲಯ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿ ಯೋರ್ವರು ಕಡತವೊಂದನ್ನು ಕಾಣೆಯಾಗಿಸಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ಶ್ರೀನಾಥ ಎಂಬವರು ಕಾರ್ಕಳ ತಾಲೂಕು ಕಚೇರಿಯ ಸಹಾ ಅಭಿಲೇಖಾಲಯ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಇವರು 2022-23 ನೇ ಸಾಲಿನಲ್ಲಿ ಕಾರ್ಕಳ ತಾಲೂಕು ಅಜೆಕಾರು ಹೋಬಳಿಯ ಎರ್ಲಪಾಡಿ ಗ್ರಾಮದ mr 03/10-11 ರ ಕಡತವನ್ನು 2022-23 ನೇ ಸಾಲಿನಲ್ಲಿ ಅರ್ಜಿದಾರರೋರ್ವರಿಗೆ ಮಾಹಿತಿ ಹಕ್ಕಿನಡಿಯಲ್ಲಿ ದಾಖಲಾತಿಯನ್ನು ನೀಡಿರುತ್ತಾರೆ.
ಅರ್ಜಿದಾರರಿಗೆ ಮಾಹಿತಿ ನೀಡಿದ ಕಡತವು ಪ್ರಸುತ್ತ ಅಭಿಲೇಖಾಲಯದ ದಾಖಲೆ ಪತ್ರದಲ್ಲಿ ಕಡತವು ಕಂಡು ಬರುವುದಿಲ್ಲ ಎಂದು ಕೆ.ಹರಿಪ್ರಸಾದ. ಉಪತಹಶೀಲ್ದಾರರು. ಅಭಿಲೇಖಾಲಯ ಕಾರ್ಕಳ ತಾಲೂಕು ಕಛೇರಿರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಪ ತಹಶೀಲ್ದಾರ್ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಶ್ರೀನಾಥ ವಿರುದ್ಧ ಕಲಂ: 9 ಸಾರ್ವಜನಿಕ ಕಡತ ಸಂರಕ್ಷಣಾ ಕಾಯ್ದೆ 2010 ರಂತೆ ಪ್ರಕರಣ ದಾಖಲಾಗಿದೆ.
