Spread the love

ಉಡುಪಿ: ಮೇ ೮ (ಹಾಯ್ ಉಡುಪಿ ನ್ಯೂಸ್) ಮಲ್ಪೆಯ ಮತ್ಸ್ಯೋದ್ಯಮಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗಿರುವ ಸುದ್ದಿಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದೇನು ಹೊಸದಲ್ಲವಲ್ಲ, ಅವರು ಮೂರು ವರ್ಷಗಳ ಹಿಂದೆ ಯೇ ಬಿಜೆಪಿಗೆ ವಾಲಿದ್ದಾರೆ. ಬಾಯಲ್ಲಿ ಸುಳ್ಳು ಹೇಳುತ್ತಿದ್ದರೂ ಒಳಗಿನಿಂದ ಬಿಜೆಪಿಯ ರಘುಪತಿ ಭಟ್ ರೊಂದಿಗೆ ಒಪ್ಪಂದ ಮಾಡಿಕೊಂಡು ಇದೀಗ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಅವರು ಓರ್ವ ಉದ್ಯಮಿಯಾಗಿ ತನ್ನ ಉದ್ಯಮಕ್ಕಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಒಂದು ವರ್ಗದ ಜನರು ಅಭಿಪ್ರಾಯವಾದರೆ, ಕಾಂಗ್ರೆಸ್ ಪಕ್ಷ ಇನ್ನು ಕರಾವಳಿಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಯದಿಂದಲೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಇನ್ನೊಂದು ವರ್ಗ ಅಭಿಪ್ರಾಯ ಪಟ್ಟಿದೆ.ಒಟ್ಟಾರೆಯಾಗಿ ತನ್ನ ರಾಜಕೀಯ ಭವಿಷ್ಯಕ್ಕಾಗಿ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದರೆ ತಪ್ಪಲ್ಲ.

ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡಿ ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದು ತಪ್ಪು ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದಿರುವುದರಿಂದ ಪಕ್ಷ ಕ್ಕೇನು ವಿಶೇಷ ನಷ್ಟವಾಗಲಿಕ್ಕಿಲ್ಲ. ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಮುಂದುವರಿದಿದ್ದರೆ ಪ್ರಮೋದ್ ಮಧ್ವರಾಜ್ ಭಾರಕ್ಕೆ! ಕಾಂಗ್ರೆಸ್ ಹಡಗು ಮುಳುಗಡೆ ಯಾಗುತ್ತಿತ್ತು. ಇದೀಗ ಹೊಸ ನಾಯಕರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಸಿಕ್ಕಂತಾಗಿದೆ. ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ನಲ್ಲಿ ಇದ್ದೂ ಇಲ್ಲದಂತಾಗಿದ್ದರು, ಆದಕಾರಣ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದಿರುವುದರಿಂದ ಕಾಂಗ್ರೆಸ್ ಗೆ ನಷ್ಟವಿಲ್ಲ. ಇನ್ನು ಪ್ರಮೋದ್ ಮಧ್ವರಾಜ್ ರ ಹಿಂದೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ ಯಾಗಲಿರುವ ಮರಿ ಕಾಂಗ್ರೆಸ್ ನಾಯಕರು ಎಷ್ಟು ಎಂದು ಕಾದು ನೋಡಬೇಕಿದೆ.

ಜಿಲ್ಲೆಯಲ್ಲಿ ಮೊದಲೇ ಬಲಿಷ್ಠವಾಗಿರುವ ಬಿಜೆಪಿಗೆ ಪ್ರಮೋದ್ ಮಧ್ವರಾಜ್ ಸೇರ್ಪಡೆಯಾಗಿ ಬಿಜೆಪಿಗೆ ಏನು ಲಾಭ ಎಂಬ ಪ್ರಶ್ನೆಗೆ ಪ್ರಮೋದರ ಆರ್ಥಿಕ ಬಲವನ್ನು ಉಪಯೋಗಿಸಿ ಕೊಳ್ಳುವುದೇ ವಿನಃ ಬೇರೇನೂ ಅಲ್ಲ.ಪ್ರಮೋದ್ ಮಧ್ವರಾಜ್ ರವರಿಗೆ ಬಿಜೆಪಿಯಲ್ಲಿ ಒಳ ಶತ್ರುಗಳ ಕಾಟವಂತೂ ತಪ್ಪಿದ್ದಲ್ಲ. ಇನ್ನು ಜನರ ವಿಶ್ವಾಸದಿಂದ ದೂರವಾಗಿರುವ ಪ್ರಮೋದ್ ಮಧ್ವರಾಜ್ ರಿಂದ ಬಿಜೆಪಿಗೆ ಏನು ಲಾಭವಾಗಲಿದೆ ,ಏನು ನಷ್ಟವಾಗಲಿದೆ, ಬಿಜೆಪಿಯ ಹಡಗು ಪ್ರಮೋದ್ ಮಧ್ವರಾಜ್ ರ ಭಾರವನ್ನು ಸಹಿಸಿಕೊಳ್ಳುವುದೇ ಎಂದು ಕಾದು ನೋಡಬೇಕು ಅಷ್ಟೇ.

ಒಟ್ಟಾರೆಯಾಗಿ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆ ಎಂಬ ಪ್ರಹಸನಕ್ಕೆ ತೆರೆ ಬಿದ್ದಿದೆ. ಇನ್ನು ಕಾಂಗ್ರೆಸ್ ಪಕ್ಷ ದಲ್ಲಿನ ಉಡುಪಿ ವಿಧಾನಸಭಾ ಕ್ಷೇತ್ರದ ನಾಯಕರಾರು? ಬಿಜೆಪಿ ಯ ರಘುಪತಿ ಭಟ್ ರು ತನ್ನ ಸ್ಥಾನವನ್ನು ಪ್ರಮೋದ್ ಮಧ್ವರಾಜ್ ರಿಗೆ ನೀಡಿ ನಾಟ್ ಔಟ್ ಆಗಿ ರಾಜಕೀಯ ದಲ್ಲಿ ಚಾಣಾಕ್ಷ ತನದಿಂದ ಮುಂದುವರಿಯುವರೋ ಕಾದು ನೋಡಬೇಕಿದೆ.

error: No Copying!