ಹಿರಿಯಡ್ಕ: ಮೇ ೮ (ಹಾಯ್ ಉಡುಪಿ ನ್ಯೂಸ್) ಮನೆ ಕೆಲಸಕ್ಕೆ ಬಂದ ಕೆಲಸಗಾರ ದಂಪತಿಗಳಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಉಡುಪಿ, ಬನ್ನಂಜೆ,ಹೀರಾಭಾಗ್ ಎದುರು , ಧೂಮಾವತಿ ೨ ನೇಅಡ್ಡ ರಸ್ತೆ, ಗುರುಕ್ರಪಾ ನಿವಾಸಿ ಪದ್ಮಾವತಿ (೩೦) ಇವರು ಮತ್ತು ಅವರ ಗಂಡ ಮಂಜುನಾಥ ಇತ್ತೀಚಿಗೆ ಕೆಲವು ದಿನಗಳಿಂದ ಸುಶಿಲಾ ರಾಘವ ಶೆಟ್ಟಿ ವಾಂಟ್ಯಾಳ ಇವರ ಮನೆಯ ಜಾಗಕ್ಕೆ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ 07/05/2022 ರಂದು ಬೆಳಿಗ್ಗೆ 09:45 ಗಂಟೆಗೆ ಅಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ KA-20-MB-7968 ಬ್ರೀಜಾ ಕಾರಿನಲ್ಲಿ ಭರತ್ ಶೆಟ್ಟಿ, ಉಮೇಶ್ ಶೆಟ್ಟಿ, ಮತ್ತು ರೇವತಿ ಶೆಟ್ಟಿ ಎಂಬವರು ಅಲ್ಲಿಗೆ ಬಂದಿಳಿದಿದ್ದು ಆ ಸಮಯ ಅಲ್ಲಿಯೇ ಇದ್ದ ಸದಾಶಿವ ಶೆಟ್ಟಿ, ಸುರೇಖಾ ಶೆಟ್ಟಿ, ರೇಖಾ ಶೆಟ್ಟಿ , ರೇಣುಕಾ ಶೆಟ್ಟಿ ಕೂಡಾ ಬಂದಿದ್ದು ಎಲ್ಲರೂ ಒಟ್ಟಾಗಿ ಪದ್ಮಾವತಿ ಹಾಗೂ ಅವರ ಗಂಡನನ್ನು ಉದ್ದೇಶಿಸಿ ನಿಂದಿಸಿ ಸೋಂಟೆಯಿಂದ ಪದ್ಮಾವತಿ ಯವರ ಗಂಡನ ಕುತ್ತಿಗೆ ಹಿಂದೆ, ಹೊಟ್ಟೆಯ ಭಾಗಕ್ಕೆ, ಕಾಲಿಗೆ ಬಾರಿಸಿದ್ದು ಕೈಗಳನ್ನು ತಿಪ್ಪಿದ್ದು ಆಗ ಪದ್ಮಾವತಿಯವರು ತಡೆಯಲು ಹೋದಾಗ ಭರತ್ ಶೆಟ್ಟಿ, ಉಮೇಶ್ ಶೆಟ್ಟಿ, ಸದಾಶಿವ ಶೆಟ್ಟಿ ಕೆನ್ನೆಗೆ ಕುತ್ತಿಗೆ ಭಾಗಕ್ಕೆ ಬೆನ್ನಿಗೆ ಗುದ್ದಿರುತ್ತಾರೆ. ಪದ್ಮಾವತಿಯವರ ಗಂಡನನ್ನು ನೆಲಕ್ಕೆ ದೂಡಿ ಇವರೆಲ್ಲರೂ ಕಾಲಿನಿಂದ ತುಳಿಯತ್ತಾ ಜೀವ ಬೆದರಿಕೆ ಹಾಕಿರುತ್ತಾರೆ ಎನ್ನಲಾಗಿದೆ. ಈ ಮದ್ಯೆ ಅವರ ಬೊಬ್ಬೆ ಕೇಳಿ ಅಕ್ಕ ಪಕ್ಕದವರು ಬರುವುದನ್ನು ಕಂಡು ಎಲ್ಲರೂ ಪದ್ಮಾವತಿಯವರಿಗೆ ಹಾಗೂ ಅವರ ಗಂಡನಿಗೆ ಹೊಡೆಯುದನ್ನು ನಿಲ್ಲಿಸಿ ಅಲ್ಲಿಂದ ಹೋಗಿರುತ್ತಾರೆ. ಹೋಗುವಾಗ ಭರತ್ ಶೆಟ್ಟಿ ಕಾರಿನಲ್ಲಿದ್ದ ತಲವಾರನ್ನು ತೆಗೆದು ತೋರಿಸಿ ಇವಾಗ ಬಚಾವ್ ಆದ್ರಿ ಇನ್ನೊಮ್ಮೆ ಜೀವ ಸಮೇತ ಬಿಡುವುದಿಲ್ಲ ಗತಿಕಾಣಿಸುತ್ತೇನೆ ಎಂದು ಹೇಳಿ ಹೋಗಿರುತ್ತಾನೆ ಎನ್ನಲಾಗಿದೆ. ಪದ್ಮಾವತಿಯವರ ಗಂಡ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಹಲ್ಲೆಗೆ ಕಾರಣ ಏನೆಂದು ತನಿಖೆಯಿಂದ ತಿಳಿಯ ಬೇಕಾಗಿದೆ.