Spread the love

ಉಡುಪಿ: ಮೇ೮ (ಹಾಯ್ ಉಡುಪಿ ನ್ಯೂಸ್) ಮಹಿಳೆಯೋರ್ವರು ಕತ್ತಿ ಹಿಡಿದು ಅಕ್ರಮ ಪ್ರವೇಶ ಮಾಡಿ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಉಡುಪಿ , ಬೈಲೂರು,ಡಯಾನ ಥಿಯೇಟರ್ ಬಳಿ, ಪದ್ಮನಾಭ ನಗರ ನಿವಾಸಿ ಡಾ.ಸಂತೋಷ್ ರಾವ್ (೪೬) ಇವರ ಮನೆಯ ಆವರಣ ಗೋಡೆಯೊಳಗೆ ದಿನಾಂಕ ೩೧-೦೩-೨೦೨೨ ರಂದು ಬೆಳಿಗ್ಗೆ ೮:೧೦ ಘಂಟೆಗೆ ಜಯಲಕ್ಷ್ಮೀ (೫೦) ಎಂಬವರು ಕತ್ತಿ ದೊಣ್ಣೆಯನ್ನು ಹಿಡಿದುಕೊಂಡು ಬಾಯಿಗೆ ಬಂದಂತೆ ಬೈದು ಕೊಂಡು ಏಕಾಏಕಿಯಾಗಿ ನುಗ್ಗಿ,  32 ಕ್ಕೂ ಅಧಿಕ ಹೂವಿನ ಗಿಡಗಳಿರುವ ಮಡಕೆಯನ್ನು ಒಡೆದು ಹಾಕಿ ನಷ್ಟವನ್ನುಂಟು ಮಾಡಿರುವುದಲ್ಲದೆ, ಡಾ.ಸಂತೋಷ್ ರಾವ್ ರಿಗೆ ಹಾಗೂ ಅವರ ಹೆಂಡತಿಗೆ ಜೀವ ಬೆದರಿಕೆ ಹಾಕಿರುತ್ತಾರೆ. ಈ ಕೃತ್ಯಕ್ಕೆ ಸುಬ್ರಹ್ಮಣ್ಯ (55) ಎಂಬವನ ಕುಮ್ಮಕ್ಕು ಇರುವುದಾಗಿ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

error: No Copying!