Spread the love

ಮಣಿಪಾಲ: ಮೇ೭(ಹಾಯ್ ಉಡುಪಿ ನ್ಯೂಸ್) ದೈವದ ಮನೆ ಯ ಬೀಗ ಮುರಿದು ಸಾಮಾಗ್ರಿಗಳ ಕಳ್ಳತನ ನಡೆದ ಘಟನೆ ನಡೆದಿದೆ.

ಉಡುಪಿ ಬ್ರಹ್ಮಗಿರಿಯ ,ಸಾಯಿರಾಧಾ ಪ್ಯಾಲೆಸ್ ನಿವಾಸಿ ಪ್ರಥ್ವಿರಾಜ್.ಬಿ.ಶೆಟ್ಟಿ ಇವರ ಕುಟುಂಬದ ಹಿರೇಬೆಟ್ಟು ಗ್ರಾಮ, ಬಾಳ್ಕಟ್ಟು ಬೀಡು ಮನೆಯ ಆವರಣದಲ್ಲಿರುವ  ದೈವದ ಮನೆಯ ಬಾಗಿಲು ಚಿಲಕವನ್ನು ದಿನಾಂಕ ೦೫-೦೫-೨೦೨೨ ರಂದು ರಾತ್ರಿ ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ 51,000/- ರೂಪಾಯಿ ಮೌಲ್ಯದ ದೈವದ ಪಂಚ ಲೋಹದ ಹಾಗೂ ಹಿತ್ತಾಳೆಯ ಸಾಮಾಗ್ರಿಗಳನ್ನು ಕಳುವು ಮಾಡಿಕೊಂಡು ಹೊಗಿರುತ್ತಾರೆ ಎಂದು ದೂರು ನೀಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!