FB_IMG_1772364231623.jpg
Spread the love

ಮಣಿಪಾಲ: ದಿನಾಂಕ:01-03-2026(ಹಾಯ್ ಉಡುಪಿ ನ್ಯೂಸ್) ಜಿಲ್ಲಾಧಿಕಾರಿಯವರು ಹೊರಡಿಸಿದ್ದ ನಿಷೇಧಾಜ್ಞೆ ಯನ್ನು ಉಲ್ಲಂಘಿಸಿ 80 ಬಡಗಬೆಟ್ಟು ಗ್ರಾಮದ ಕಬ್ಯಾಡಿ ತಟ್ಟೂರು ಎಂಬಲ್ಲಿಗೆ  ಉಡುಪಿ ಕೋಟಿ ಚೆನ್ನಯ ಕಂಬಳ ಸಮಿತಿಯವರು ಅಕ್ರಮ ಪ್ರವೇಶ ಮಾಡಿ ಶಂಕುಸ್ಥಾಪನೆ ಮತ್ತು ಪೋಸ್ಟರ್ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಎಂದು ಉಡುಪಿ ತಹಶೀಲ್ದಾರ್ ರವರು ನೀಡಿದ ದೂರಿನ ಮೇರೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ 38 ಜನರ ವಿರುದ್ಧ ದೂರು ದಾಖಲಾಗಿದೆ.

ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಕಬ್ಯಾಡಿ ತಟ್ಟೂರು ಎಂಬಲ್ಲಿ ಸರ್ವೆ ನಂಬ್ರ 11/1 ರಲ್ಲಿ 6.30 ಎಕ್ರೆ ಸರಕಾರಿ ಸ್ಥಳವನ್ನು ಕಂಬಳದ ಜೊತೆಗೆ ಕಂಬಳದ ಕೋಣಗಳನ್ನು ಸಾಗಿಸುವ ವಾಹನಗಳ ನಿಲುಗಡೆ ಹಾಗೂ ಪ್ರಾಣಿಗಳ ಚಿಕಿತ್ಸೆಗಾಗಿ ಚಿಕಿತ್ಸಾ ಕೇಂದ್ರ ನಿರ್ಮಾಣದ ಉದ್ದೇಶಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಸರಿನಲ್ಲಿ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ನಡಾವಳಿ ಆದೇಶ ಸಂಖ್ಯೆ ಎ.ಡಿಸ್, ಎಲ್‌, ಎನ್‌, ಡಿ/ಪಿ.ಡಿ.ಆರ್(1)/ಸಿ.ಆರ್/107/2023/E131998 ದಿ:23/09/2025 ರಂತೆ ಕಾಯ್ದಿರಿಸಲಾಗಿತ್ತು.

ಸ್ಥಳವನ್ನು ಕರ್ನಾಟಕ ರಾಜ್ಯ ಕಂಬಳ ಅಸೋಷಿಯೇಶನ್‌ ವತಿಯಿಂದ ಮಾನ್ಯತೆ ಇರುವ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿ ಇವರು ಕಾನೂನಿಗೆ ವಿರುದ್ದವಾಗಿ ಮೇಲ್ಕಂಡ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಯುವಜನ ಮತ್ತು ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಿದ ಜಮೀನನ್ನು ಸಮತಟ್ಟು ಮಾಡಿ ದಿನಾಂಕ 28/02/2026 ರಂದು ಬೆಳಿಗ್ಗೆ 10:30 ಗಂಟೆಗೆ ಉಡುಪಿ ಕೋಟಿ ಚೆನ್ನಯ್ಯ ಕಂಬಳ ಸಮಿತಿ ಇದರ ಶಂಕುಸ್ಥಾಪನೆ ಮತ್ತು ಪೋಸ್ಟರ್‌ ಅನಾವರಣಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಸ್ಥಳೀಯರು ಮತ್ತು ಕಂಬಳ ಸಮಿತಿಯ ಪದಾಧಿಕಾರಿಯವರುಗಳ ನಡುವೆ ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇರುವುದರಿಂದ ಹಾಗೂ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕದಡುವ ಸಾಧ್ಯತೆ ಇರುವುದರಿಂದ  ಉಡುಪಿ ಜಿಲ್ಲಾಧಿಕಾರಿಯವರು ಉಲ್ಲೇಖದಲ್ಲಿ ನಮೂದಿಸಿದಂತೆ ನಿಷೇದಾಜ್ಞೆ ಆದೇಶ ಹೊರಡಿಸಿದ್ದರೂ ಕೂಡ 1.ಗುರ್ಮೆ ಸುರೇಶ್‌ ಶೆಟ್ಟಿ, ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರು,2.ಯಶ್‌ ಪಾಲ್‌ ಸುವರ್ಣ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು, 3.ಸುನಿಲ್‌ ಕುಮಾರ್‌ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರು,4.ಕಿರಣ್‌ ಕುಮಾರ್‌ ಕೊಡ್ಗಿ, ಶಾಸಕರು ಕುಂದಾಪುರ ವಿಧಾನ ಸಭಾ ಕ್ಷೇತ್ರ ,5.ಗುರುರಾಜ್‌ ಗಂಟಿಹೊಳೆ, ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರು,6. ಹರೀಶ್‌ ಪೂಂಜಾ, ಬೆಳ್ತಂಗಡಿ ಶಾಸಕರು,7. ರಾಜೇಶ್‌ ನಾಯ್ಕ, ಬಂಟ್ವಾಳ ಶಾಸಕರು,8. ಧನಂಜಯ್‌ ಸರ್ಜಿ, ಎಮ್‌.ಎಲ್.ಸಿ,9. ಶ್ರೀನಿವಾಸ ಪೂಜಾರಿ, ಸಂಸದರು,10. ಲಾಲಾಜಿ ಆರ್‌ ಮೆಂಡನ್‌, ಕಾಪು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು, 11. ಮಟ್ಟಾರು ರತ್ನಾಕರ ಹೆಗ್ಡೆ, 12.ಶಿಲ್ಪಾ ಸುವರ್ಣ ಕಾಪು, 13.ಗೀತಾಂಜಲಿ ಸುವರ್ಣ ಕಟಪಾಡಿ, 14.ನಂದಳಿಕೆ ಶ್ರೀಕಾಂತ್‌ ಭಟ್‌, 15.ಶುಭಕರ ಶೆಟ್ಟಿ 80 ಬಡಗಬೆಟ್ಟು ಗ್ರಾಮ, 16.ಸಂದೀಪ್‌ ಶೆಟ್ಟಿ 80 ಬಡಗಬೆಟ್ಟು ಗ್ರಾಮ,17.ಜಿಯಾನಂದ ಹೆಗ್ಡೆ ಬೈರಂಪಳ್ಳಿ, 18.ವೀಣಾ ಶೆಟ್ಟಿ ಉಡುಪಿ, 19.ಸಾಯಿಶ ಸುಧಾಕರ ಶೆಟ್ಟಿ ಪೆರ್ಡೂರು, 20.ಬೆಳಪು ದೇವಿಪ್ರಸಾದ್‌ ಶೆಟ್ಟಿ, 21.ಕುತ್ಯಾರು ನವೀನ್‌ ಶೆಟ್ಟಿ,22. ಶ್ರೀನಿಧಿ ಹೆಗ್ಡೆ ಉಡುಪಿ, 23.ಹರಿಕೃಷ್ಣ ಬಂಟ್ವಾಳ, 24.ರವೀಂದ್ರ ಮಡಿವಾಳ್‌ ಕಾರ್ಕಳ, 25.ಅಂತೋನಿ ಡಿಸೋಜಾ ನಕ್ರೆ, 26.ವಿಜಯ್‌ ಕುಮಾರ್‌ ಕಂಗಿನ ಮನೆ ಹೊಸ್ಮಾರ್‌ 27. ಶ್ಯಾಮಲಾ ಕುಂದರ್‌ ಹಿರಿಯಡ್ಕ, 28.ಲೋಕೇಶ್‌ ಶೆಟ್ಟಿ ಕಾರ್ಕಳ, 29.ಮೋಹನ್‌ ಭಟ್‌ ಹಿರಿಯಡ್ಕ, 30.ದಿಲ್ಲೇಶ್‌ ಶೆಟ್ಟಿ ಕುಕ್ಕೆಹಳ್ಳಿ,31. ಶಾಂತಾರಾಮ ಶೆಟ್ಟಿ ರಾಜೀವನಗರ, 32.ರವೀಂದ್ರ ನಾಯ್ಕ ಕುಕ್ಕುದಕಟ್ಟೆ 80 ಬಡಗಬೆಟ್ಟು ಗ್ರಾಮ, 33.ಗೋಪಾಲ ಕೃಷ್ಣ ಮಟ್ಟು, 34.ಸುಭಾಷ್‌ ಬಲ್ಲಾಳ್‌ ಕಟಪಾಡಿ 35. ಶಿವಪುನಾರ್‌ ಹಿರೇಬೆಟ್ಟು, ಸ್ಥಳೀಯ ಕಾರ್ಯಕರ್ತರು,36.ಮೋಹನ್‌ ಶೆಟ್ಟಿ ಕಬ್ಯಾಡಿ, 37. ಕೃಷ್ಣ ಕುಲಾಲ್‌ ವರ್ವಾಡಿ, 38. ಇತರರು ದಿನಾಂಕ 28/02/2026 ರಂದು ಬೆಳಿಗ್ಗೆ 10:30 ಗಂಟೆಯಿಂದ 12:30 ಗಂಟೆಯ ಅವಧಿಯಲ್ಲಿ ಅಕ್ರಮಕೂಟ ಸೇರಿಕೊಂಡು ಉಡುಪಿ ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿ ಧ್ವನಿವರ್ಧಕ ಪರವಾನಿಗೆ ಇಲ್ಲದೇ ನಿರ್ಭಂದಿತ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಸ್ಥಳವನ್ನು ಅಗೆದು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ ಇವರ ನೇತ್ರತ್ವದಲ್ಲಿ ಕೋಟಿ ಚೆನ್ನಯ್ಯ ಕಂಬಳ ಸಮತಿ ಉಡುಪಿ ಇದರ ಶಂಕುಸ್ಥಾಪನೆ ಮತ್ತು ಪೋಸ್ಟರ್‌ ಅನಾವರಣಾ ಸಮಾರಂಭ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಪಿ ಆರ್‌ ಗುರುರಾಜ್‌ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಯವರು ಉಡುಪಿ ತಾಲೂಕು  ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಅಪರಾಧ ಕ್ರಮಾಂಕ 30/2026 ಕಲಂ:189(2), 191(2), 329(3) ಜೊತೆಗೆ 190 ಬಿ ಎನ್‌ ಎಸ್‌ ,37, 109 ಕೆಪಿ ಆಕ್ಟ್‌ ರಂತೆ ಪ್ರಕರಣ ದಾಖಲಾಗಿದೆ.

error: No Copying!