ಅಮಾಸೆಬೈಲು: ದಿನಾಂಕ :01-03-2026(ಹಾಯ್ ಉಡುಪಿ ನ್ಯೂಸ್) ಪ್ರೀತಿಸಿದ ಹುಡುಗಿಯ ಹೆಸರಲ್ಲಿ ಬೇರೆ ಹುಡುಗಿಯೋರ್ವಳು ವಾಟ್ಸಪ್ ಸಂದೇಶ ಕಳುಹಿಸಿ 1.81ಲಕ್ಷ ರೂಪಾಯಿ ವಂಚನೆ ನಡೆಸಿದ್ದಾಳೆ ಎಂದು ರವಿಚಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ,ಹೊಸಂಗಡಿ ಗ್ರಾಮದ ನಿವಾಸಿ ರವಿಚಂದ್ರ (29) ಎಂಬವರು ಈ ಹಿಂದೆ ಮೂರು ವರ್ಷಗಳ ಹಿಂದೆ ಹೊಸನಗರ ತಾಲೂಕಿನ ಅನುಷಾ ಎನ್ನುವವರನ್ನು ಪ್ರೀತಿಸುತ್ತಿದ್ದು ಅನುಷಾಳ ಹೆತ್ತವರಿಗೆ ಈ ವಿಷಯದಲ್ಲಿ ಒಪ್ಪಿಗೆ ಇಲ್ಲದೆ ಇದ್ದು ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಪ್ರಕರಣ ಇತ್ಯರ್ಥವಾಗಿರುತ್ತದೆ.
ನಂತರ ದಿನಾಂಕ 24/10/2025 ರಂದು ಈ ಹಿಂದೆ ಅನುಷಾಳು ಉಪಯೋಗಿಸುತ್ತಿದ್ದ ಮೊಬೈಲ್ ನಂಬ್ರದಿಂದ ಆರೋಪಿತಳಾದ ದಿವ್ಯಾ ಎಂಬಾಕೆ ರವಿಚಂದ್ರ ರವರ ವಾಟ್ಸಾಪ್ ನಂಬ್ರ ಕ್ಕೆ ಹುಟ್ಟು ಹಬ್ಬದ ಶುಭಾಶಯ ಎಂದು ವಾಟ್ಸಾಪ್ ಮೆಸೆಜ್ ಬಂದಿದ್ದು ಸಂದೇಶ ಅನುಷಾಳೆ ಕಳುಹಿಸಿರಬಹುದೆಂದು ರವಿಚಂದ್ರ ರವರು ಮರು ಸಂದೇಶ ಕಳುಹಿಸಿದ್ದು ನಂತರ ಇಬ್ಬರೂ ಪರಸ್ಪರ ಸಂಧೇಶ ವಿನಿಮಯ ಮಾಡಿಕೊಂಡಿದ್ದು ಈ ಮಧ್ಯೆ ಸಂದೇಶದ ಮೂಲಕ ಆರೋಪಿತಳು ತನಗೆ ಮನೆಯಲ್ಲಿ ಸಮಸ್ಯೆ ಇದೆ ಎಂದು ಹೇಳಿ ಹಣದ ಅವಶ್ಯಕತೆ ಇದೆ ಎಂದು ನಂಬಿಸಿ ಸ್ಕ್ಯಾನರ್ ಮೂಲಕ ದಿನಾಂಕ 03/11/2025 ರಿಂದ ದಿನಾಂಕ 13/02/2026 ರ ನಡುವೆ ಬೇರೆ ಖಾತೆಗಳಿಗೆ ಒಟ್ಟು 1,80,200/- ರೂಪಾಯಿ ಹಣವನ್ನು ಆರೋಪಿತಳು ತಿಳಿಸಿದ ಬೇರೆ ಬೇರೆ ಖಾತೆಗಳಿಗೆ ಹಾಕಿಸಿಕೊಂಡು ರವಿಚಂದ್ರ ರವರಿಗೆ ಮೋಸ ಮಾಡುವ ಉದ್ದೇಶದಿಂದ ಮೊಬೈಲ್ ಪೋನು ಬಳಸಿ ಮೊಬೈಲ್ ನಲ್ಲಿ ಮಾತುಕತೆ ನಡೆಸದೆ ವಾಟ್ಸಾಪ್ ಮತ್ತು ಇನ್ಸ್ಟಾ ಗ್ರಾಂ ನಲ್ಲಿ ಚಾಟ್ ಮಾಡಿ ಅನ್ಯ ವ್ಯಕ್ತಿಯಂತೆ ನಟಿಸಿ ರವಿಚಂದ್ರ ರಿಂದ ಹಂತ ಹಂತವಾಗಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ರವಿಚಂದ್ರ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರವಿಚಂದ್ರ ಅವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕಲಂ: 318 (4), 319(2) BNS ರಂತೆ ಪ್ರಕರಣ ದಾಖಲಾಗಿದೆ.
