ಮಲ್ಪೆ: ದಿನಾಂಕ:27-02-2026(ಹಾಯ್ ಉಡುಪಿ ನ್ಯೂಸ್) ಸಿಂಗಾಪುರದಲ್ಲಿ ಕೆಲಸ ಮಾಡಿ ಕೊಂಡಿರುವ ಕಿದಿಯೂರಿನ ವ್ಯಕ್ತಿ ಯೋರ್ವರಿಗೆ ಪರಿಚಿತ ಸ್ನೇಹಿತರು ಪಾಲುದಾರಿಕೆಯಲ್ಲಿ ಜಾಗ ಖರೀದಿ ಮಾಡಿ ಮಾರಾಟ ಮಾಡುವ ವ್ಯವಹಾರ ಮಾಡುವ ಎಂದು ನಂಬಿಸಿ ಎರಡು ಕೋಟಿ ಹನ್ನೆರಡು ಲಕ್ಷ ರೂಪಾಯಿ ವಂಚಿಸಿದ್ದಾರೆಂದು ದೀಪಕ್ ಎಂಬವರು ದೂರು ದಾಖಲಿಸಿದ್ದಾರೆ.
ಉಡುಪಿ ಕಿದಿಯೂರು ಗ್ರಾಮದ ನಿವಾಸಿ ದೀಪಕ್ ಎಂಬವರು ಸಿಂಗಾಪುರದಲ್ಲಿ ಕೆಲಸಮಾಡಿಕೊಂಡಿದ್ದು, ಅವರಿಗೆ 2000 ನೇ ಇಸವಿಯಿಂದ 1 ನೇ ಆರೋಪಿತ ಪ್ರವೀಣ ದೇಶ್ ಭಾಗ್ ಪರಿಚಯವಾಗಿದ್ದು, ಆತ್ಮೀಯ ಸ್ನೇಹಿತರಾಗಿರುತ್ತಾರೆ.
ಹೀಗಿರುತ್ತಾ ಪ್ರವೀಣ್ ದೇಶ್ ಭಾಗ್ ನು 2020 ರಲ್ಲಿ ಕೋವಿಡ್ ಸಮಯದಲ್ಲಿ ದೀಪಕ್ ರವರಲ್ಲಿ ಜಾಗ ಖರೀದಿಸಿ ಮಾರಾಟ ಮಾಡುವ ವ್ಯವಹಾರ ನಡೆಸಿದರೆ ಅಧಿಕ ಲಾಭ ಬರುವುದಾಗಿ ನಂಬಿಸಿದ್ದು, ವ್ಯವಹಾರವನ್ನು ಇಬ್ಬರು ಪಾಲುದಾರಿಕೆಯಲ್ಲಿ ಮಾಡುವ ಎಂದು ತಿಳಿಸಿದ್ದು, ಅಲ್ಲದೆ ಆರೋಪಿ 1 ಪ್ರವೀಣ್ ದೇಶ್ ಭಾಗ್ ಮತ್ತು 2 ನೇ ಪ್ರಶಾಂತ್ ಎಲ್ ಸನೀಲ್ ನು ದೀಪಕ್ ರವರಲ್ಲಿ ಉಡುಪಿ ಕಾರ್ಕಳ ಕಡೆಯಲ್ಲಿ ಕಡಿಮೆ ಮೊತ್ತಕ್ಕೆ ಜಾಗ ಸಿಗುತ್ತದೆ ಪಾಲುದಾರಿಕೆಯಲ್ಲಿ ಜಾಗ ಖರೀದಿಸುವ ಎಂದು ನಂಬಿಕೆ ಹುಟ್ಟಿಸಿದ್ದು, ಅದರಂತೆ ದೀಪಕ್ ರವರು ಹಣವನ್ನು ಹೂಡಿಕೆ ಮಾಡಿದ್ದು, ದಿನಾಂಕ 28/09/2020 ರಿಂದ 24/02/2025 ರ ತನಕ ದೀಪಕ್ ರವರಿಂದ ಜಾಗ ಖರೀದಿಸುವ ಬಗ್ಗೆ ಹಂತಹಂತವಾಗಿ ಒಟ್ಟು ರೂಪಾಯಿ 2,11,18,100/- ಹಣವನ್ನು ಪ್ರವೀಣ್ ದೇಶ್ ಭಾಗ್ ಮತ್ತು ಪ್ರಶಾಂತ್ ಎಲ್ ಸನೀಲ್ ಎಂಬಿಬ್ಬರು ಆಪಾದಿತರು ಪಡೆದುಕೊಂಡು ಅವರಿಗೆ ಜಾಗವನ್ನು ಅವರ ಹೆಸರಿಗೆ ಮಾಡದೇ ಇದ್ದು, ಅಲ್ಲದೆ ಅವರಿಗೆ ಹಣವನ್ನು ವಾಪಾಸು ನೀಡದೇ ಇದ್ದು, 3 ನೇ ಆಪಾದಿತ ಬ್ರಾಂಚ್ ಮ್ಯಾನೇಜರ್ ಬ್ಯಾಂಕ್ ಆಫ್ ಬರೋಡ ಇವನು ಪ್ರವೀಣ್ ದೇಶ್ ಭಾಗ್ ಮತ್ತು ಪ್ರಶಾಂತ್ ಎಲ್ ಸನೀಲ್ ರೊಂದಿಗೆ ಸೇರಿಕೊಂಡು ದೀಪಕ್ ರವರ ನಖಲಿ ಸಹಿ ಮಾಡಿ ಬ್ಯಾಂಕ್ ಖಾತೆ ತೆರೆದಿರುತ್ತಾರೆ.
ಆ ಪ್ರಕಾರ ಈ ಮೂವರು ಆರೋಪಿತರು ದೀಪಕ್ ರವರಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 316,318(2),318(3),318(4),320,336,338,339,333,351,319 ,61 ಬಿಎನ್ಎಸ್ 2023 ಮತ್ತು 46 ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
